ADVERTISEMENT

ಊಟದಲ್ಲಿ ಈರುಳ್ಳಿ: ನಗ್ನನಾಗಿ ರಂಪಾಟ ನಡೆಸಿದ ಭಾರತೀಯ!

ಪಿಟಿಐ
Published 14 ಜೂನ್ 2017, 19:32 IST
Last Updated 14 ಜೂನ್ 2017, 19:32 IST
ಊಟದಲ್ಲಿ ಈರುಳ್ಳಿ: ನಗ್ನನಾಗಿ ರಂಪಾಟ ನಡೆಸಿದ ಭಾರತೀಯ!
ಊಟದಲ್ಲಿ ಈರುಳ್ಳಿ: ನಗ್ನನಾಗಿ ರಂಪಾಟ ನಡೆಸಿದ ಭಾರತೀಯ!   

ವಾಷಿಂಗ್ಟನ್‌: ಪಿಟ್ಸ್‌ಬರ್ಗ್‌ನ ಅಕ್ಲಾಂಡ್‌ನಲ್ಲಿರುವ ಭಾರತೀಯ ರೆಸ್ಟೋರೆಂಟ್‌ನಲ್ಲಿ ತನಗೆ ನೀಡಿದ್ದ ಊಟದಲ್ಲಿ ಈರುಳ್ಳಿ ಬಳಸಲಾಗಿತ್ತು ಎಂದು ಆರೋಪಿಸಿ ಗದ್ದಲ ನಡೆಸಿದ್ದ ಭಾರತೀಯನನ್ನು ಪೊಲೀಸರು ಬಂಧಿಸಿದ್ದಾರೆ.

ಯುಬಾ ರಾಜ್‌ ಶರ್ಮಾ (43) ಬಂಧಿತ. ಈತ ನಗ್ನನಾಗಿ ರೆಸ್ಟೋರೆಂಟ್‌  ಸಿಬ್ಬಂದಿಗೆ ಗುಂಡಿಕ್ಕುವ ಬೆದರಿಕೆಯನ್ನೂ ಒಡಿದ್ದ.

ಭಯೋತ್ಪಾದಕ ಬೆದರಿಕೆ, ಸಾರ್ವಜನಿಕ ಸ್ಥಳದಲ್ಲಿ ಮದ್ಯ ಕುಡಿದು ಅಸಭ್ಯವಾಗಿ ವರ್ತಿಸಿದ್ದರಿಂದ ಈತನ ವಿರುದ್ಧ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.