ADVERTISEMENT

ಎಂಜಿನಿಯರ್‌ಗಳ ಬಿಡುಗಡೆ ಸಚಿವ ರಬ್ಬಾನಿ ಭರವಸೆ

ಪಿಟಿಐ
Published 8 ಮೇ 2018, 19:30 IST
Last Updated 8 ಮೇ 2018, 19:30 IST
ಸಲಾಹುದ್ದೀನ್‌ ರಬ್ಬಾನಿ
ಸಲಾಹುದ್ದೀನ್‌ ರಬ್ಬಾನಿ   

ಕಾಬೂಲ್‌: ‘ತಾಲಿಬಾನ್‌ ಉಗ್ರರಿಂದ ಅಪಹರಣಕ್ಕೀಡಾಗಿರುವಭಾರತದ ಏಳು ಮಂದಿ ಎಂಜಿನಿಯರ್‌ಗಳ ಸುರಕ್ಷಿತ ಬಿಡುಗಡೆಗಾಗಿ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು’ ಎಂದು ಅಫ್ಗಾನಿಸ್ತಾನದಲ್ಲಿನ ಭಾರತದ ರಾಯಭಾರಿ ವಿನಯ್‌ಕುಮಾರ್‌ ಅವರಿಗೆ ವಿದೇಶಾಂಗ ಸಚಿವ ಸಲಾಹುದ್ದೀನ್‌ ರಬ್ಬಾನಿ ಭರವಸೆ ನೀಡಿದ್ದಾರೆ.

ವಿನಯ್‌ಕುಮಾರ್‌ ಅವರನ್ನು  ಭೇಟಿ ಮಾಡಿದ ರಬ್ಬಾನಿ ಅವರು, ‘ಎಂಜಿನಿಯರ್‌ಗಳ ಅಪಹರಣದ ಬಗ್ಗೆ ಆತಂಕ ವ್ಯಕ್ತಪಡಿಸಿ ಅವರ ಸುರಕ್ಷಿತ ಬಿಡುಗಡೆಗಾಗಿ ದೇಶದ ಸೇನೆ ಯಾವುದೇ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುವುದಿಲ್ಲ’ ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರ ಜೊತೆಗೂ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಸುಷ್ಮಾ ಅವರು, ಎಂಜಿನಿಯರುಗಳ ಬಗ್ಗೆ ಭಾರತದ ಕಳವಳ ವ್ಯಕ್ತಪಡಿಸಿ ಅವರನ್ನು  ಸುರಕ್ಷಿತವಾಗಿ ಬಿಡುಗಡೆಗೊಳಿಸಲು ನೆರವು ನೀಡಬೇಕು’ ಎಂದು ಕೋರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.