ADVERTISEMENT

ಎವರೆಸ್ಟ್ ಗೆ ಕರ್ನಾಟಕ ಕುವರಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 16:10 IST
Last Updated 4 ಫೆಬ್ರುವರಿ 2011, 16:10 IST

ಕಠ್ಮಂಡು (ಐಎಎನ್‌ಎಸ್): ಮೌಂಟ್ ಎವರೆಸ್ಟ್ ಪರ್ವತ ಏರಲು ಭಾರತದಿಂದ ಈ ವರ್ಷ ಹೆಚ್ಚಿನ ಸಂಖ್ಯೆ ಪರ್ವತಾರೋಹಿಗಳು ಆಸಕ್ತರಾಗಿದ್ದಾರೆ.

ಮೌಂಟ್ ಎವರೆಸ್ಟ್ ಪರ್ವತವನ್ನು ಈಗಾಗಲೇ 20 ಸಲ ಹತ್ತಿ ಇಳಿದು ಜೀವಂತ ದಂತಕತೆಯಾಗಿರುವ ನೇಪಾಳದ ಪರ್ವತಾರೋಹಿ ಅಪಾ ಶೆರ್ಪಾ ಅವರ ನೆರವಿನೊಂದಿಗೆ ಕರ್ನಾಟಕದ ಸುನೀತಾ ಸಿಂಗ್ ಸೇರಿ ಎಂಟು ಮಂದಿ ಪುರುಷರು ಮತ್ತು ಮಹಿಳೆಯರು ವಿಶ್ವದ ಅತಿ ಎತ್ತರದ ಪರ್ವತವನ್ನು ಏರಲು ಸನ್ನದ್ಧರಾಗಿದ್ದಾರೆ.

ದುಬಾರಿ ವೆಚ್ಚದ ಈ ಪರ್ವತಾರೋಹಣಕ್ಕೆ ಇದೇ ಮೊದಲ ಬಾರಿಗೆ ಭಾರತದಿಂದ ಇಷ್ಟೊಂದು ಸಂಖ್ಯೆಯ ಮಂದಿ ಪ್ರಯತ್ನ ನಡೆಸುತ್ತಿದ್ದಾರೆ. ಶೆರ್ಪಾ ಅವರು 21ನೇ ಬಾರಿಗೆ ಈ ಪರ್ವತಾರೋಹಣ ಮಾಡಿ ದಾಖಲೆ ನಿರ್ಮಿಸಲಿದ್ದಾರೆ. ಜಾರ್ಖಂಡ್, ಹರಿಯಾಣ, ಕರ್ನಾಟಕ ಈ ರಾಜ್ಯಗಳ ಮೂವರು ಮಹಿಳೆಯರು ಮತ್ತು ಐವರು ಪುರುಷರು ಈ ವರ್ಷದ ಬೇಸಿಗೆಯಲ್ಲಿ ಪರಿಸರ ಸ್ನೇಹಿ ಎವರೆಸ್ಟ್ ಪರ್ವತಾರೋಹಣ ಮಾಡಿ 8,848 ಮೀಟರ್ ಎತ್ತರಕ್ಕೆ ತಲುಪಲಿದ್ದಾರೆ.

ಈ ರೀತಿಯ ಪರ್ವತಾರೋಹಣವನ್ನು 2008ರಲ್ಲಿ ನೇಪಾಳದ ದವಾ ಸ್ಟೀವನ್ ಶೆರ್ಪಾ ಆರಂಭಿಸಿದ್ದರು.  ದೆಹಲಿಯ ವಿದ್ಯಾರ್ಥಿ ಅರ್ಜುನ್ ಕಳೆದ ವರ್ಷ ಈ ಪರ್ವತದ ತುದಿ ತಲುಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.