ADVERTISEMENT

ಎಸ್‌ಯುವಿ ವಾಹನ ಡಿಕ್ಕಿ: ಭಾರತೀಯ ಸಾವು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2014, 19:30 IST
Last Updated 9 ಮಾರ್ಚ್ 2014, 19:30 IST

ನ್ಯೂಯಾರ್ಕ್‌ (ಪಿಟಿಐ): ಎಸ್‌ಯುವಿ (ಸ್ಪೋರ್ಟ್‌ ಯುಟಿಲಿಟಿ ವೆಹಿಕಲ್‌) ಡಿಕ್ಕಿ ಹೊಡೆದ ಪರಿಣಾಮ ಭಾರತ ಮೂಲದ ವ್ಯಕ್ತಿಯೊಬ್ಬರು ಮೃತ­ಪಟ್ಟಿರುವ ಘಟನೆ ನ್ಯೂಯಾರ್ಕ್‌­ನಲ್ಲಿ ನಡೆದಿದೆ.

ನ್ಯೂಯಾರ್ಕ್‌ನಲ್ಲಿ ಅಗ್ನಿಶಾಮಕ ಸುರಕ್ಷಿತ ವಿಭಾಗದ ನಿರ್ದೇಶಕರಾಗಿ ಇತ್ತೀಚೆಗೆ ಕೆಲಸಕ್ಕೆ ಸೇರಿದ್ದ ಭಾರತದ ಕುಮಾರ್‌ ರಂಗನಾಥ್‌ ಮೃತ­ಪಟ್ಟವರು. ರಂಗನಾಥ್‌ ಶುಕ್ರವಾರ ಸಿಟಿ ಹೋಟೆಲ್‌ ಸಮೀಪ ರಸ್ತೆ ದಾಟುತ್ತಿದ್ದಾಗ  ಎಸ್‌ಯುವಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತ ನಡೆಸಿ ವಾಹನ ನಿಲ್ಲಿಸದೇ ಪರಾರಿಯಾದ ವಾಹನ­ವನ್ನು  ಕಪ್ಪು ಬಣ್ಣದ ಎಸ್‌ಯುವಿ ಎಂದು ಪ್ರತ್ಯಕ್ಷದರ್ಶಿಗಳು ಗುರುತಿಸಿ­ದ್ದಾರೆ.  ಆದರೆ  ವಾಹನದ ಸಂಖ್ಯೆ­ಯನ್ನು  ಬರೆದುಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.