ADVERTISEMENT

ಏಪ್ರಿಲ್ 17ಕ್ಕೆ ಥ್ಯಾಚರ್ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 19:59 IST
Last Updated 9 ಏಪ್ರಿಲ್ 2013, 19:59 IST
ಏಪ್ರಿಲ್ 17ಕ್ಕೆ ಥ್ಯಾಚರ್ ಅಂತ್ಯಕ್ರಿಯೆ
ಏಪ್ರಿಲ್ 17ಕ್ಕೆ ಥ್ಯಾಚರ್ ಅಂತ್ಯಕ್ರಿಯೆ   

ಲಂಡನ್ (ಪಿಟಿಐ): ಸೋಮವಾರ ನಿಧನ ಹೊಂದಿದ ಬ್ರಿಟನ್ನಿನ ಮೊದಲ ಮಹಿಳಾ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಅಂತ್ಯಕ್ರಿಯೆ ಏಪ್ರಿಲ್ 17ರಂದು ಸೇಂಟ್ ಪೌಲ್‌ನ ಕ್ಯಾಥೆಡ್ರಲ್‌ನಲ್ಲಿ ನಡೆಯಲಿದೆ.

ರಾಣಿ 2ನೇ ಎಲಿಜಬೆತ್ ಅವರು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಅರಮನೆ ಮೂಲಗಳು ತಿಳಿಸಿವೆ.

ಸರ್ಕಾರಿ ಗೌರವಗಳಿಲ್ಲ:  ಸಕಲ ಸರ್ಕಾರಿ ಗೌರವಗೊಳೊಂದಿಗೆ ಅಂತ್ಯ ಸಂಸ್ಕಾರ ನಡೆಸುವುದನ್ನು ಸ್ವತಃ ಥ್ಯಾಚರ್ ಬಯಸಿರಲಿಲ್ಲ. ಅದು ತಮಗೆ ಹೊಂದುವುದಿಲ್ಲ ಎಂದೂ ಅವರು ಹೇಳಿದ್ದರು. ಹಾಗಾಗಿ ಅಂತ್ಯಸಂಸ್ಕಾರವನ್ನು ಅವರ ಆಶಯದಂತೆಯೇ ನೆರವೇರಿಸಲಾಗುವುದು ಎಂದು ಥ್ಯಾಚರ್  ಗೆಳೆಯ ಹಾಗೂ ವಕ್ತಾರ ಲಾರ್ಡ್ ಟಿಮ್ ಬೆಲ್ ಹೇಳಿದ್ದಾರೆ.

ಸಂಸತ್ತಿನಲ್ಲಿ ಶ್ರದ್ಧಾಂಜಲಿ: ಥ್ಯಾಚರ್ ನಿಧನದ ಹಿನ್ನೆಲೆಯಲ್ಲಿ ಬ್ರಿಟನ್ ಸಂಸತ್ತಿನ ಎರಡೂ ಸದನಗಳು ಮಂಗಳವಾರ ತುರ್ತು ಅಧಿವೇಶನ ಸೇರಿ, ಅಗಲಿದ ನಾಯಕಿಗೆ ಶ್ರದ್ಧಾಂಜಲಿ ಸಲ್ಲಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.