ADVERTISEMENT

ಕಡಲುಗಳ್ಳರಿಂದ ಭಾರತೀಯ ನಾವಿಕರಿದ್ದ ಹಡಗು ಅಪಹರಣ

​ಪ್ರಜಾವಾಣಿ ವಾರ್ತೆ
Published 12 ಮೇ 2012, 7:40 IST
Last Updated 12 ಮೇ 2012, 7:40 IST

ಲಂಡನ್ (ಐಎಎನ್‌ಎಸ್): ಭಾರತೀಯ ನಾವಿಕರನ್ನು ಒಳಗೊಂಡಂತೆ ಸುಮಾರು 15 ಮಂದಿ ಸಿಬ್ಬಂದಿಗಳಿದ್ದ ತೈಲ ಸಾಗಣೆ ಹಡಗನ್ನು ಅರೆಬಿಯನ್ ಸಮುದ್ರದಲ್ಲಿ ಕಡಲುಗಳ್ಳರು ಅಪಹರಿಸಿರುವುದಾಗಿ ಶನಿವಾರ ಬಿಬಿಸಿ ವರದಿ ಮಾಡಿದೆ.

135,000 ಟನ್ ತೈಲ ಹೊತ್ತು ಸಾಗುತ್ತಿದ್ದ ಲಿಬೆರಿಯನ್ ಧ್ವಜವುಳ್ಳ ಸ್ಮಿರ್ನಿ ಎಂಬ ಸರಕು ಸಾಗಣೆ ಹಡಗನ್ನು ಓಮನ್ ಕರಾವಳಿಯಲ್ಲಿ ಕಡಲುಗಳ್ಳರು ಅಪಹರಿಸುವುದಾಗಿ ಮಾಧ್ಯಮ ಬಿತ್ತರಿಸಿದೆ.

ಭಾರತೀಯ ಹಾಗೂ ಫಿಲಿಪೈನ್ಸ್‌ನ ಸುಮಾರು 15ಕ್ಕೂ ಅಧಿಕ ನಾವಿಕ ಸಿಬ್ಬಂದಿ ಹೊಂದಿರುವ ಈ ಹಡಗನ್ನು ಓಮಾನಿ ಕರಾವಳಿ ತೀರದಿಂದ ಸುಮಾರು 630 ಕಿ.ಮೀ ದೂರದಲ್ಲಿ ಕಡಲುಗಳ್ಳರು ಅಪಹರಿಸಿದ್ದು, ಗುರುವಾರದಿಂದ ಹಡಗಿನ ಸಿಬ್ಬಂದಿ ಸಂಪರ್ಕ ಕಡಿತಗೊಂಡಿದೆ ಎಂದು ಹೇಳಲಾಗಿದೆ. 

2011ರಲ್ಲಿ ಮೊದಲ ಸಮುದ್ರಯಾನ ಆರಂಭಿಸಿದ ಹಡಗಿನದು ಇದು ಎರಡನೇಯ ಪ್ರಯಾಣವಾಗಿದೆ. ಅಂತರ ರಾಷ್ಟ್ರೀಯ ಕಡಲ ಸಂಘಟನೆ ಪ್ರಕಾರ ಇದುವರೆಗೆ ಸೋಮಾಲಿಯಾ ಕಡಲುಗಳ್ಳರು 17 ಹಡಗು ಹಾಗೂ ಸುಮಾರು 300 ಸಿಬ್ಬಂದಿಯನ್ನು ಅಪಹರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.