ADVERTISEMENT

ಕಡಲ ಕುದುರೆ ಸಂತತಿಗೆ ಕುತ್ತು...

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2012, 19:30 IST
Last Updated 5 ಆಗಸ್ಟ್ 2012, 19:30 IST

ಲಂಡನ್ (ಪಿಟಿಐ): ಕಡಲ ಕುದುರೆಗಳ ಅಕ್ರಮ ಬೇಟೆ ಇದೇ ರೀತಿ ಮುಂದುವರಿದರೆ ಮುಂದಿನ ಹತ್ತು ವರ್ಷಗಳಲ್ಲಿ ಅವುಗಳ ಸಂತತಿ ಸಂಪೂರ್ಣವಾಗಿ ನಶಿಸುವ ಆತಂಕ ಎದುರಾಗಿದೆ.

ಪ್ರತಿ ವರ್ಷ ಚೀನಾದಲ್ಲಿ ಸುಮಾರು 150 ದಶಲಕ್ಷ ಕಡಲ ಕುದುರೆಗಳನ್ನು ಕೊಲ್ಲಲಾಗುತ್ತಿದೆ ಎಂದು ಕಡಲ ಜೀವಶಾಸ್ತ್ರಜ್ಞರು ನಡೆಸಿರುವ ಸಂಶೋಧನೆಯನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಪ್ರಕಟಿಸಿದೆ.

ಸಾವಿರಾರು ವರ್ಷಗಳಿಂದ ವೈದ್ಯಕೀಯ ಚಿಕಿತ್ಸೆಗಾಗಿ ಕಡಲ ಕುದುರೆಗಳನ್ನು ಬಳಸಲಾಗುತ್ತಿದೆ. ಕುರುಡುತನದ ಸಮಸ್ಯೆಗಳು, ಮೂತ್ರಪಿಂಡದ ಸೋಂಕು ಸೇರಿದಂತೆ ವಿವಿಧ ಕಾಯಿಲೆಗಳ ಚಿಕಿತ್ಸೆಗಾಗಿ ಅದು ಬಳಕೆಯಾಗುತ್ತಿದೆ. ಚೀನಾದ ವೈದ್ಯಕೀಯ ಮಾರುಕಟ್ಟೆಗೆ 70 ದೇಶಗಳು ಕಡಲ ಕುದುರೆಗಳನ್ನು ಪೂರೈಸುತ್ತಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.