ADVERTISEMENT

ಕಣ್ಣೀರು ತರಿಸುವ ಈರುಳ್ಳಿ ಸಂತೋಷಕ್ಕೂ ಕಾರಣ!

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 19:30 IST
Last Updated 16 ಸೆಪ್ಟೆಂಬರ್ 2011, 19:30 IST

ಲಂಡನ್, (ಪಿಟಿಐ): ಲಕ್ಷಾಂತರ ಮನೆಗಳಲ್ಲಿ ಗೃಹಿಣಿಯರ ಕಣ್ಣಲ್ಲಿ ನೀರು ತರಿಸುವ ಈರುಳ್ಳಿಗೆ ಸಂತೋಷವನ್ನು ಕೊಡುವ ಗುಣವೂ ಇದೆಯಂತೆ!

ಹಾಗಂತ ನೂತನ ಸಮೀಕ್ಷೆಯೊಂದು ಹೇಳಿದೆ. ಬೆಲೆಗಳಿಗೆ ಸಂಬಂಧಿಸಿದಂತೆ ಸಂತೋಷ ನೀಡುವುದು ಯಾವುದು ಎಂಬುದರ ಬಗ್ಗೆ ಗ್ರಾಹಕರಿಗೆ 100 ವಸ್ತುಗಳ ಮೇಲೆ ಪ್ರಶ್ನಾವಳಿ ನೀಡಲಾಗಿತ್ತು
ಉತ್ಪಾದನೆಗಳ ಆಧಾರದಲ್ಲಿ ಒಂಬತ್ತು ವಿಭಾಗಗಳಲ್ಲಿ 1,500 ಕ್ಕೂ ಅಧಿಕ ಮಂದಿ ಬೆಲೆ ಕಟ್ಟಿದ್ದರು. ರುಚಿ, ಸವಿ,ಆರೋಗ್ಯ, ಸೊಗಸು, ಸುರಕ್ಷಿತ, ಅಂದ, ಚಿಕ್ಕದು ಹಾಗೂ ದುಬಾರಿ ವಸ್ತು-ಎಂಬ ಒಂಬತ್ತು ವಿಭಾಗಗಳು ಇಲ್ಲಿದ್ದವು.

ಈ ಸ್ಪರ್ಧೆಲ್ಲಿ  ಚಾಕಲೇಟ್, ಕುರುಕಲು ತಿಂಡಿ, ಕೇಕ್ ಹಾಗೂ ಬಿಯರ್ ಅನ್ನು ಹಿಂದಕ್ಕೆ ಹಾಕಿರುವ ಈರುಳ್ಳಿ ಗ್ರಾಹಕರ ಅಚ್ಚುಮೆಚ್ಚಿನ ಪದಾರ್ಥ ಎಂಬ ಬಿರುದು ಪಡೆದುಕೊಂಡಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.