ಬೆಂಗಳೂರು: ಜೆ.ಪಿ.ನಗರ ಸಮೀಪದ ಎಲ್‌ಐಸಿ ಕಾಲೊನಿಯಲ್ಲಿ ಶನಿವಾರ ರಾತ್ರಿ ಎ.ಪುಲ್ಲಯ್ಯ (40) ಎಂಬುವರ ಮೇಲೆ ಸಂಬಂಧಿಕನೇ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.
ಎ.ಪುಲ್ಲಯ್ಯ, ಆಂಧ್ರಪ್ರದೇಶ ಮೂಲದವರು. ಅವರ ತಂಗಿಯ ಪತಿ ಡಿ.ಪುಲ್ಲಯ್ಯ ಎಂಬಾತ ಈ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್‌ಐಸಿ ಕಾಲೊನಿಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಅವರಿಬ್ಬರೂ ಕುಟುಂಬ ಸದಸ್ಯರೊಂದಿಗೆ ಆ ಕಟ್ಟಡದಲ್ಲೇ ವಾಸವಾಗಿದ್ದರು. ಡಿ.ಪುಲ್ಲಯ್ಯ ಮದ್ಯಪಾನ ಮಾಡಲು ಹಣ ಕೊಡುವಂತೆ ಎ.ಪುಲ್ಲಯ್ಯನಿಗೆ ಕೇಳಿದ್ದಾನೆ. ಆದರೆ, ಅವರು ಹಣ ಕೊಡಲು ನಿರಾಕರಿಸಿದ್ದಾರೆ.
ಇದರಿಂದ ಕೋಪಗೊಂಡ ಆತ ಅವರೊಂದಿಗೆ ಜಗಳವಾಡಿದ್ದಾನೆ. ನಂತರ ಕುಟುಂಬ ಸದಸ್ಯರೆಲ್ಲಾ ಮಲಗಿದ್ದ ಸಂದರ್ಭದಲ್ಲಿ ರಾತ್ರಿ ಎರಡು ಗಂಟೆ ಸುಮಾರಿಗೆ ಆತ ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.