ಇಸ್ಲಾಮಾಬಾದ್ (ಪಿಟಿಐ): ‘ಕಾಶ್ಮೀರ ವಿಚಾರ 1947ರ ರಾಷ್ಟ್ರವಿಭಜನೆಯ ಅಪೂರ್ಣ ಕಾರ್ಯಸೂಚಿ’ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಹೀಲ್ ಷರೀಫ್ ಹೇಳಿದ್ದಾರೆ.
ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ವಿಶ್ವವಿದ್ಯಾಲಯದಲ್ಲಿ (ಎನ್‌ಡಿಯು) ಮಾತನಾಡಿದ ರಹೀಲ್, ‘ಪಾಕಿಸ್ತಾನ ಮತ್ತು ಕಾಶ್ಮೀರ ಅವಿಭಜಿತ’ ಎಂದಿದ್ದಾರೆ.
ಕಾಶ್ಮೀರ ವಿವಾದವನ್ನು ವಿಶ್ವಸಂಸ್ಥೆಯ ಮೂಲಕ ಬಗೆಹರಿಸಿಕೊಂಡು ಆ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಅವಕಾಶ ನೀಡುವುದು ಕೂಡಾ ಮುಖ್ಯ ಎಂದು ರಹೀಲ್ ಹೇಳಿದ್ದಾರೆ.
‘ನಮ್ಮ ಶತ್ರುಗಳು ಭಯೋತ್ಪಾದನೆಗೆ ಕುಮ್ಮಕ್ಕು ನೀಡಿ, ದೇಶದ ವಿರುದ್ಧ ಸಂಚು ರೂಪಿಸಿದರೆ ಅಂತಹ ಸಂಚನ್ನು ವಿಫಲಗೊಳಿಸುವುದು ನಮಗೆ ತಿಳಿದಿದೆ. ಅಂತಹ ಕೃತ್ಯಗಳಿಗೆ ನಾವು ತಕ್ಕ ಉತ್ತರ ನೀಡುತ್ತೇವೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.