
ಪ್ರಜಾವಾಣಿ ವಾರ್ತೆಲಂಡನ್ (ಪಿಟಿಐ): ಮದ್ಯ ಕುಡಿಯುವ ಸ್ಪರ್ಧೆಯಲ್ಲಿ ವಿಜೇತನಾದ ವ್ಯಕ್ತಿ ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿರುವ ಘಟನೆ ಸ್ಪೇನ್‌ನಲ್ಲಿ ನಡೆದಿದೆ.
ಬುಧವಾರ ಸ್ಪೇನ್‌ನ ಮರ‌್ಸಿಯಾ ಪ್ರಾಂತ್ಯದಲ್ಲಿ ಮದ್ಯ ಉತ್ಸವದ ಹಿನ್ನೆಲೆಯಲ್ಲಿ ಆಚರಿಸಲಾದ ಸ್ಪರ್ಧೆಯ ಅಂತಿಮ ಹಂತದಲ್ಲಿ ಗ್ರಾಸಿಯಾ (45) ಎಂಬಾತ 20 ನಿಮಿಷದಲ್ಲಿ ಆರು ಲೀಟರ್ ಮದ್ಯ ಕುಡಿದು ಜಯ ಗಳಿಸಿದ. ಸ್ಪರ್ಧೆಯ ನಂತರ ನಿರಂತರವಾಗಿ ವಾಂತಿ ಮಾಡಿಕೊಂಡು, ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ. ಸ್ಪೇನ್‌ನ ಪ್ರಾಚೀನ ವೈಭವ ನೆನಪಿಸುವ ಮದ್ಯ ಕುಡಿಯುವ ಉತ್ಸವ ಈ ಬಾರಿ ದುರಂತ ಅಂತ್ಯ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.