ADVERTISEMENT

ಕೊಡಕ್ ಕಂಪೆನಿ ದಿವಾಳಿ!

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 19:30 IST
Last Updated 19 ಜನವರಿ 2012, 19:30 IST

ನ್ಯೂಯಾರ್ಕ್ (ಎಎಫ್‌ಪಿ): ಶತಮಾನಗಳ ಇತಿಹಾಸ ಹೊಂದಿರುವ ಅಮೆರಿಕದ ಪ್ರಸಿದ್ಧ ಕ್ಯಾಮೆರಾ ಮತ್ತು ಫಿಲ್ಮ್ ತಯಾರಿಕಾ ಸಂಸ್ಥೆ ಕೊಡಕ್ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದೆ.

ದಶಕಗಳ ಹಿಂದೆಯೇ ಛಾಯಾಚಿತ್ರ ಗ್ರಹಣ ಕಲೆಯನ್ನು ಜನಸಾಮಾನ್ಯರಿಗೆ ತಲುಪಿಸಿದ ಖ್ಯಾತಿ ಹೊಂದಿದ ಜಾಗತಿಕ ಮಟ್ಟದ ಈ ಕಂಪೆನಿ, ಇದೀಗ ಆರ್ಥಿಕ ದಿವಾಳಿಯಾಗಿರುವುದಾಗಿ ಘೋಷಿಸಿಕೊಂಡಿದೆ.

`ನಿರ್ದೇಶಕ ಮಂಡಳಿ ಮತ್ತು ಹಿರಿಯ ವ್ಯವಸ್ಥಾಪಕ ಮಂಡಳಿ ಸದಸ್ಯರು ಕಂಪೆನಿಯ ಭವಿಷ್ಯದ ದೃಷ್ಟಿಯಿಂದ ಈ ನಿರ್ಣಯ ಕೈಗೊಂಡಿದ್ದಾರೆ~ ಎಂದು ಕಾರ್ಯನಿರ್ವಾಹಕ ಅಧಿಕಾರಿ ಅಂಟೋನಿಯೊ ಪೆರೆಜ್ ಹೇಳಿದ್ದಾರೆ.
`ಮುಂದಿನ ದಿನಗಳಲ್ಲಿ ಉತ್ಕೃಷ್ಟ ದರ್ಜೆಯ ಡಿಜಿಟಲ್ ಉಪಕರಣತಯಾರಿಸುವ  ಕಂಪೆನಿಯಾಗಿ ಕೊಡಕ್ ಮರುಹುಟ್ಟು ಪಡೆಯಲಿದೆ~ ಎಂದು ಪೆರೆಜ್ ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಂದು ಕಾಲಕ್ಕೆ ಕ್ಯಾಮೆರಾ ಮತ್ತು ಫಿಲ್ಮ್‌ನ ವಿಶ್ವ ಮಾರುಕಟ್ಟೆಯಲ್ಲಿ ಏಕಚಕ್ರಾಧಿಪತಿಯಂತೆ ಮೆರೆದ ಕೊಡಕ್,  ನಂತರದ ಡಿಜಿಟಲ್ ಯುಗದಲ್ಲಿ  ಪೈಪೋಟಿ ಎದುರಿಸಲಾಗದೆ ನೇಪಥ್ಯಕ್ಕೆ ಸರಿಯಿತು.

1980ರ ಉಚ್ಛ್ರಾಯ ಕಾಲದಲ್ಲಿ ಸುಮಾರು 1,45 ಲಕ್ಷ ಸಿಬ್ಬಂದಿಯನ್ನು ಹೊಂದಿದ್ದ ಕೊಡಕ್‌ನ ಈಗಿನ ಸ್ಥಿತಿಯಿಂದ, ಪ್ರಸಕ್ತ ಇರುವ  19 ಸಾವಿರ ಸಿಬ್ಬಂದಿ ಭವಿಷ್ಯ ತೂಗುಯ್ಯಾಲೆಯಲ್ಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.