ADVERTISEMENT

ಕೋಟ್ಯಧೀಶರ ನಗರಿ ದುಬೈ: ಭಾರತೀಯರ ಕೊಡುಗೆ ಅಪಾರ

​ಪ್ರಜಾವಾಣಿ ವಾರ್ತೆ
Published 26 ಜನವರಿ 2012, 19:30 IST
Last Updated 26 ಜನವರಿ 2012, 19:30 IST

ದುಬೈ (ಪಿಟಿಐ): ದುಬೈ ಕೋಟ್ಯಧೀಶರ ನಗರಿ ಪಟ್ಟಿಗೆ ಸೇರಲು ಭಾರತೀಯ ಧನವಂತರೂ ಕಾರಣರಾಗಿದ್ದಾರೆ. ಅತ್ಯಂತ ಶ್ರೀಮಂತರು ವಾಸಿಸುವ ನಗರಗಳ ಕುರಿತ ಇತ್ತೀಚಿನ ಸೂಚ್ಯಂಕದ ಪ್ರಕಾರ ಮುಂಬೈ ಕೋಟ್ಯಧೀಶರು ಇರುವ ಐದನೇ ಪ್ರಮುಖ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಡೀ ಮಧ್ಯ ಪ್ರಾಚ್ಯದಲ್ಲಿ ದುಬೈನಲ್ಲೇ ಅತಿ ಹೆಚ್ಚು ಧನವಂತರು ನೆಲೆಸಿದ್ದಾರೆ. ಇದರಲ್ಲಿ ಭಾರತೀಯ ಕೋಟ್ಯಧೀಶರ ಪಾಲೂ ಇದೆ ಎಂದು `ವೆಲ್ತಿ ಇನ್‌ಸೈಟ್~ ಸಂಸ್ಥೆಯ ಅಂಕಿಅಂಶ ಹೇಳಿದೆ.

ಕೋಟ್ಯಧಿಪತಿಗಳು ಹೆಚ್ಚಿರುವ ನಗರದ ಪಟ್ಟಿಯಲ್ಲಿ ನ್ಯೂಯಾರ್ಕ್ ಮೊದಲ ಸ್ಥಾನದಲ್ಲಿದ್ದರೆ, ಮಾಸ್ಕೊ, ಲಂಡನ್, ಹಾಂಕಾಂಗ್ ಕ್ರಮವಾಗಿ ನಂತರದ ಸ್ಥಾನಗಳಲ್ಲಿ ಗುರುತಿಸಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.