ADVERTISEMENT

ಕೋರ್ಟ್ ತೀರ್ಪಿಗೆ ಸಹಮತ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

ವಾಷಿಂಗ್ಟನ್ (ಪಿಟಿಐ): ಸಿಖ್‌ರ ಹಕ್ಕುಗಳ ಸಂಘಟನೆಯೊಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ಸಲ್ಲಿಸಿರುವ ದೂರಿನ ಬಗ್ಗೆ ನ್ಯಾಯಾಲಯ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಭಾರತೀಯ ಮೂಲದ ಅಮೆರಿಕ ಅಟಾರ್ನಿ ರವಿ ಬಾತ್ರಾ ಹೇಳಿದ್ದಾರೆ.

`ಅಮೆರಿಕದಲ್ಲಿ ನ್ಯಾಯಾಲಯದ ಶುಲ್ಕ ಪಾವತಿಸಲು ಸಿದ್ಧರಿದ್ದರೆ, ಯಾರು ಬೇಕಿದ್ದರೂ, ಯಾರ ವಿರುದ್ಧವಾದರೂ, ಯಾವುದೇ ವಿಷಯಲ್ಲಾದರೂ ದಾವೆ ಹೂಡಬಹುದು. ಆದರೆ ಇದು ವೈಯಕ್ತಿಕವೇ ಅಥವಾ ಸಾರ್ವಜನಿಕ ಕಾಳಜಿಯದ್ದೇ ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ' ಎಂದು ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಬಾತ್ರಾ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.