ಮಾಸ್ಕೊ (ಎಎಫ್‌ಪಿ): ಜನಮತಗಣನೆಯಲ್ಲಿ ಸ್ವಾಯತ್ತ ರಾಷ್ಟ್ರವಾಗಿ ಹೊರಹೊಮ್ಮಿರುವ ಕ್ರಿಮಿಯಾವನ್ನು ತಮ್ಮ ದೇಶದೊಂದಿಗೆ ಸೇರಿಸಿಕೊಳ್ಳುವ ಪ್ರಕ್ರಿಯೆಗೆ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರು ಮಂಗಳವಾರ ಚಾಲನೆ ನೀಡಿದರು.
ಕ್ರಿಮಿಯಾ ರಷ್ಯಾದೊಂದಿಗೆ ಸೇರ್ಪಡೆಗೊಳ್ಳುವ ಮೂಲಕ ಎರಡನೇ ಮಹಾಯುದ್ಧದ ನಂತರ ಯುರೋಪ್‌ನ ಗಡಿಭಾಗವು ಮಹತ್ವದ ಮರು ವಿನ್ಯಾಸವನ್ನು ಪಡೆಯಲಿದೆ.
ಕ್ರಿಮಿಯಾ ಪಾರ್ಲಿಮೆಂಟ್‌ಗೆ ರಷ್ಯಾದೊಂದಿಗೆ ಸೇರುವಂತೆ ಅಧಿಕೃತ ಮನವಿ ಕಳುಹಿಸಿರುವ ಪುಟಿನ್ ಅವರು ದೇಶದ ಭಾಗವಾಗಿ ಮುಂದುವರಿಯಲಿರುವ ಕ್ರಿಮಿಯಾ ತನ್ನೆಲ್ಲ ಅಧಿಕಾರದ ಶಾಖೆಗಳನ್ನು ಒಪ್ಪಂದ ಮೂಲಕ ಅಧಿನಗೊಳಿಸುವಂತೆ ಆದೇಶಿಸಿದ್ದಾರೆ.
ಸೋಮವಾರ ಪ್ರಕಟಗೊಂಡ ಜನಮತಗಣನೆ ಫಲಿತಾಂಶದ ನಂತರ ಕ್ರಿಮಿಯಾ ಶೀಘ್ರದಲ್ಲಿಯೇ ರಷ್ಯಾದೊಂದಿಗೆ ಸೇರಿಕೊಳ್ಳುವುದಾಗಿ ತಿಳಿಸಿತ್ತು.
ಇದರ ಬೆನ್ನಲ್ಲೇ ಪಾರ್ಲಿಮೆಂಟಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ಪುಟಿನ್ ಅವರು ಕ್ರಿಮಿಯಾ ವಿಲೀನ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.