ಇಸ್ಲಾಮಾಬಾದ್(ಪಿಟಿಐ): ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯದ ಹಾಟ್-7 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಪಾಕಿಸ್ತಾನ ಶುಕ್ರವಾರ ಯಶಸ್ವಿಯಾಗಿ ನಡೆಸಿದೆ. ಸುಮಾರು 700 ಕಿ.ಮೀ. ದೂರ ಸಾಗಬಲ್ಲ ಈ ಕ್ಷಿಪಣಿಯು ಭಾರತವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಬಲ್ಲುದು.
ಮಾಸ್ಕೊ (ಎಎಫ್ಪಿ): ರಷ್ಯ ತನ್ನ ಪರಮಾಣು ಸಾಮರ್ಥ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ಉದ್ದೇಶದಿಂದ ಬುಲಾವಾ ಖಂಡಾಂತರ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ನಡೆಸಿದೆ.
37 ಟನ್ ಭಾರದ ಈ ಕ್ಷಿಪಣಿಯನ್ನು ಯೂರಿ ಡಾಲ್ಗೊರಿಕಿ ಜಲಾಂತರ್ಗಾಮಿ ಮೂಲಕ ಹಾರಿಸಲಾಯಿತಲ್ಲದೆ ಅದು 6000 ಕಿ.ಮೀ. ದೂರದ ಕಮಚಟ್ಕಾ ದ್ವೀಪದ ಗುರಿಯನ್ನು ತಲುಪಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.