ADVERTISEMENT

ಖಲೀದಾ ಜಿಯಾಗೆ ಜಾಮೀನು

ಪಿಟಿಐ
Published 12 ಮಾರ್ಚ್ 2018, 19:30 IST
Last Updated 12 ಮಾರ್ಚ್ 2018, 19:30 IST
ಖಲೀದಾ ಜಿಯಾ
ಖಲೀದಾ ಜಿಯಾ   

ಢಾಕಾ : ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲುಪಾಲಾಗಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರಿಗೆ ಸೋಮವಾರ ಢಾಕಾ ಹೈಕೋರ್ಟ್‌ ನಾಲ್ಕು ತಿಂಗಳು ಜಾಮೀನು ಮಂಜೂರು ಮಾಡಿದೆ. ಆದರೆ ಜೈಲಿನಿಂದ ಹೊರಹೋಗುವ ಅವರ ಆಸೆ ಕೈಗೂಡಿಲ್ಲ. ಏಕೆಂದರೆ ಮತ್ತೊಂದು ಪ್ರಕರಣದಲ್ಲಿ ಜಿಯಾ ಅವರಿಗೆ ವಾರಂಟ್‌ ಜಾರಿ ಮಾಡಲಾಗಿದೆ.

ಜಿಯಾ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಂ. ಎನ್ಯಯೆತೂರ್ ರಹೀಮ್ ಮತ್ತು ಶಾಹಿದುಲ್ ಕರೀಮ್ ಅವರ ಪೀಠ ವಿಚಾರಣೆ ನಡೆಸಿತ್ತು.

ಢಾಕಾದ ಹಲವೆಡೆ ಬೆಂಕಿ ಹಚ್ಚಿದ ಘಟನೆಗಳಲ್ಲಿ ಜಿಯಾ ಅವರ ಕೈವಾಡ ಎಂದು ಆರೋಪಿಸಲಾಗಿದೆ. ವಿಚಾರಣೆಗಾಗಿ ಕೇಂದ್ರ ಕೊಮಿಲ್ಲಾ ನ್ಯಾಯಾಲಯಕ್ಕೆ ಹಾಜರಾಗುವಂತೆ ಅವರಿಗೆ ತಿಳಿಸಲಾಗಿದೆ.

ADVERTISEMENT

ಅನಾಥಾಶ್ರಮ ಟ್ರಸ್ಟ್‌ಗಾಗಿ ವಿದೇಶದಿಂದ ಬಂದ ಅಕ್ರಮ ಹಣ ಸಂಬಂಧ ಜಿಯಾ ಅವರಿಗೆ ಜೈಲು ಶಿಕ್ಷೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.