ADVERTISEMENT

ಖುರೇಷಿ ಮೇಲೆ ಪಿಪಿಪಿ ವರಿಷ್ಠರ ಕೆಂಗಣ್ಣು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 19:30 IST
Last Updated 13 ಫೆಬ್ರುವರಿ 2011, 19:30 IST

ಲಾಹೋರ್ (ಪಿಟಿಐ): ಪಾಕ್ ಸರ್ಕಾರದ ಸಂಪುಟ ಪುನರ್ ರಚನೆಯಲ್ಲಿ ತಮಗೆ ನೀಡಲಾದ ಹೊಸ ಖಾತೆಯನ್ನು ನಿರಾಕರಿಸುವ ಮೂಲಕ ಪಕ್ಷದ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿರುವ ವಿದೇಶಾಂಗ ವ್ಯವಹಾರಗಳ ಮಾಜಿ ಸಚಿವ ಶಾ ಮೆಹಮೂದ್ ಖುರೇಷಿ ಅವರು ಶಿಸ್ತುಕ್ರಮ ಎದುರಿಸುವ ಸಾಧ್ಯತೆಗಳಿವೆ.

ಹೊಸ ಖಾತೆ ನಿರಾಕರಿಸುವ ಮೂಲಕ ಪಕ್ಷದ ಶಿಸ್ತು ಉಲ್ಲಂಘಿಸಿರುವ ಖುರೇಷಿ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ)ಯ  ಒಂದು ಗುಂಪು ವರಿಷ್ಠರ  ಮೇಲೆ ತೀವ್ರ ಒತ್ತಡ ಹೇರಿದೆ.

 ತಮಗೆ ನೀಡಿರುವ ಜಲ ಮತ್ತು ವಿದ್ಯುತ್ ಖಾತೆಯಿಂದ ತೀವ್ರ ಅಸಮಾಧಾನಗೊಂಡ ಖುರೇಷಿ ಅವರು ಶುಕ್ರವಾರ ನಡೆದ ಸಚಿವ ಸಂಪುಟದ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ.ಅವರ ಆಗಮನದ ನಿರೀಕ್ಷೆಯಲ್ಲಿ ಪ್ರಮಾಣ ವಚನ  ಸಮಾರಂಭವನ್ನು 25 ನಿಮಿಷ ಮುಂದೂಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.