ADVERTISEMENT

ಗಡಿಯಲ್ಲಿ ನೀತಿ ಸಂಹಿತೆ ಜಾರಿ ಅಗತ್ಯ: ಚೀನಾ

​ಪ್ರಜಾವಾಣಿ ವಾರ್ತೆ
Published 4 ಜೂನ್ 2015, 7:27 IST
Last Updated 4 ಜೂನ್ 2015, 7:27 IST

ಚೀನಾ (ಪಿಟಿಐ): ಭಾರತ ಮತ್ತು ಚೀನಾ ಗಡಿಯಲ್ಲಿ ಶಾಶ್ವತವಾಗಿ ಶಾಂತಿ ನೆಲೆಸಲು ಗಡಿಯಲ್ಲಿ ಉಭಯ ದೇಶಗಳು ನೀತಿ ಸಂಹಿತೆಯ ಒಪ್ಪಂದ ಮಾಡಿಕೊಳ್ಳಬೇಕು ಎಂದು ಚೀನಾ ಗುರುವಾರ ಹೇಳಿದೆ.

ಪ್ರಧಾನಿಮಂತ್ರಿ ನರೇಂದ ಮೋದಿ ಅವರ ಚೀನಾ ಭೇಟಿ ಬಳಿಕ ಅಲ್ಲಿನ ವಿದೇಶಾಂಗ ಕಾರ್ಯದರ್ಶಿಯವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಚೀನಾ ಬೇಟಿ ಸಂದರ್ಭದಲ್ಲಿ ಮೋದಿ ಅವರು ಉಭಯ ದೇಶಗಳ ಗಡಿ ಸಮಸ್ಯೆ ಕುರಿತಂತೆ ವಿಸ್ತಾರವಾಗಿ ಚರ್ಚೆ ನಡೆಸಿದ್ದರು.

ಉಭಯ ದೇಶಗಳ ಮಧ್ಯೆ ನೀತಿ ಸಂಹಿತೆ ಜಾರಿಯಾದರೆ ಭವಿಷ್ಯದಲ್ಲಿ ಗಡಿ ಸಮಸ್ಯೆಗಳು ಉದ್ಬವಿಸುವುದಿಲ್ಲ ಎಂದು ಚೀನಾ ಅಭಿಪ್ರಯಾಪಟ್ಟಿದೆ.

ಸದಾ ಗಡಿ ಮತ್ತು ಅರುಣಾಚಲ ಪ್ರದೇಶ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಚೀನಾದ ಈ ನಡೆ ಉಭಯ ದೆಶಗಳ ದ್ವಿಪಕ್ಷಿಯ ಬಾಂಧವ್ಯಕ್ಕೆ ಹೊಸ ಆಯಾಮ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.