ಕಠ್ಮಂಡು (ಪಿಟಿಐ): 67ನೇ ಗಣರಾಜ್ಯೋತ್ಸವದ ಅಂಗವಾಗಿ ಭಾರತವು ನೆರೆಯ ನೇಪಾಳಕ್ಕೆ 40 ಆಂಬುಲೆನ್ಸ್‌ಗಳು ಹಾಗೂ ಎಂಟು ಬಸ್‌ಗಳನ್ನು ಕೊಡುಗೆಯಾಗಿ ನೀಡಿದೆ.
ಇಲ್ಲಿನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಗಣರಾಜ್ಯೋತ್ಸವ ಸಮಾರಂಭದ ಬಳಿಕ ಈ ವಾಹನಗಳನ್ನು ಹಸ್ತಾಂತರಿಸಿದರು.
ಭಾರತದ ರಾಯಭಾರಿ ರಂಜಿತ್ ರೇ, ಅವರು 33 ಅಂಬುಲೆನ್ಸ್‌ಗಳು ಹಾಗೂ ಆರು ಬಸ್‌ಗಳ ಕೀಲಿಕೈಗಳನ್ನು ವಿವಿಧ ದತ್ತಿ ಸಂಸ್ಥೆಗಳು ಹಾಗೂ ಶಾಲೆಗಳಿಗೆ ಹಸ್ತಾಂತರ ಮಾಡಿದರು.
ಇನ್ಹುಳಿದ ಏಳು ಅಂಬುಲೆನ್ಸ್‌ಗಳು ಹಾಗೂ ಎರಡು ಬಸ್‌ಗಳನ್ನು ನೇಪಾಳದ ಬಿರ್ಗುಂಜ್‌ನಲ್ಲಿರುವ ಭಾರತದ ರಾಜತಾಂತ್ರಿಕ ಅಧಿಕಾರಿ ವಿವಿಧ ಸಂಸ್ಥೆಗಳಿಗೆ ಹಸ್ತಾಂತರಿಸಿದರು.
ಪುಸ್ತಕ ವಿತರಣೆ: ಇದೇ ವೇಳೆ ನೇಪಾಳದ ಶಾಲೆ ಹಾಗೂ ತರಬೇತಿ ಸಂಸ್ಥೆಗಳ 52 ಗ್ರಂಥಾಲಯಗಳಿಗೆ ಪುಸಕ್ತಗಳ ವಿತರಣೆಯೂ ನಡೆಯಿತು.
ರಾಜತಾಂತ್ರಿಕ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಉದ್ಯಮ ವಲಯ ಪ್ರಮುಖರು, ಸಾಮಾಜಿಕ ಹೋರಾಟಗಾರರು, ಪತ್ರಕರ್ತರು ಸೇರಿದಂತೆ 2,500ಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.