ADVERTISEMENT

ಗುಪ್ತಾಗೆ ರೂ 88 ಕೋಟಿ ದಂಡ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 19:30 IST
Last Updated 22 ಮಾರ್ಚ್ 2014, 19:30 IST

ನ್ಯೂಯಾರ್ಕ್ (ಪಿಟಿಐ): ಹೂಡಿಕೆ ವ್ಯವಹಾರದಲ್ಲಿ ಅಕ್ರಮ ಎಸಗಿದ,  ‘ಗೋಲ್‌್ಡಮ್ಯಾನ್‌ ಸಚ್‌’ ಹೂಡಿಕೆ ಕಂಪೆನಿಯ ಮಾಜಿ ನಿರ್ದೇಶಕ ರಜತ್‌ ಗುಪ್ತಾಗೆ ಅಮೆರಿಕದ ಷೇರು ವಿನಿಮಯ ಆಯೋಗ (ಎಸ್‌ಇಸಿ) ಸುಮಾರು ರೂ  88 ಕೋಟಿ ದಂಡ ವಿಧಿಸುವುದರ ಜತೆಯಲ್ಲಿ ಸಾರ್ವಜನಿಕ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸದಂತೆ ಆಜೀವ ನಿರ್ಬಂಧ ಹೇರಿದೆ.

ಈ ಸಂಬಂಧ ಜಿಲ್ಲಾ ಕೋರ್ಟ್ ನೀಡಿರುವ  ತೀರ್ಪನ್ನು ಎತ್ತಿ ಹಿಡಿಯುವಂತೆ ಎಸ್‌ಇಸಿ ಮೇಲ್ಮನವಿಯಲ್ಲಿ ಕೋರ್ಟ್ ಗೆ ಕೇಳಿಕೊಂಡಿದೆ. ಕಂಪೆನಿಯ ಹೂಡಿಕೆ ಎಜೆಂಟರು, ಷೇರುದಾರರ ಜತೆ ಭಾರತ ಮೂಲದಗುಪ್ತಾ ಕಾನೂನು ಬಾಹಿರವಾಗಿ ವ್ಯವಹಾರ ಕೈಗೊಂಡ ಹಿನ್ನೆಲೆಯಲ್ಲಿ ಅವರ ವಿರುದ್ಧ ಆರೋಪ ಪಟ್ಟಿ ಹೊರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.