ADVERTISEMENT

ಗುರುದ್ವಾರ ದಾಳಿ-ಸಂತ್ರಸ್ತರಿಗೆ ಕೃಷ್ಣ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST

ನ್ಯೂಯಾರ್ಕ್ (ಪಿಟಿಐ): ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ ಕೃಷ್ಣ ಅವರು ಓಕ್ ಕ್ರೀಕ್ ಗುರುದ್ವಾರದಲ್ಲಿ ನಡೆದ ದಾಳಿಯಲ್ಲಿ  ಸಂತ್ರಸ್ತರಾದವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

 ಹಿಂಸಾಚಾರ ನಡೆಸುವ ಮತ್ತು ದ್ವೇಷದ ಬೀಜ ಬಿತ್ತುವವರನ್ನು ಭಾರತ ಮತ್ತು ಅಮೆರಿಕ ಒಟ್ಟಾಗಿ ಎದುರಿಸಲಿದೆ ಎಂದು ಈ ಸಂದರ್ಭದಲ್ಲಿ ಸಚಿವರು ಹೇಳಿದರು.

ಮಿಲ್ವಾಯುಕೀಯಲ್ಲಿರುವ ಫ್ರೊಡ್ಟರ್ಟ್ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ  ಕೃಷ್ಣ ಅವರು ದಾಳಿಯಲ್ಲಿ ಗಾಯಗೊಂಡು ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿರುವ  ಧರ್ಮಗುರು ಪಂಜಾಬ್ ಸಿಂಗ್ ಅವರ ಕುಟುಂಬದವರೊಂದಿಗೆ ಮಾತುಕತೆ ನಡೆಸಿದರು.

ನಂತರ ಸಚಿವರು ದಾಳಿಯಲ್ಲಿ ಮೃತಪಟ್ಟ ಆರು ಮಂದಿ ಸಿಖ್ಖರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.