ADVERTISEMENT

ಗ್ರೀಸ್‌ನಲ್ಲಿ ಜನರಿಂದ ದೇಶವ್ಯಾಪಿ ಮುಷ್ಕರ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 16:20 IST
Last Updated 23 ಫೆಬ್ರುವರಿ 2011, 16:20 IST

ಅಥೆನ್ಸ್ (ಡಿಪಿಎ): 24 ಗಂಟೆಗಳ ದೇಶವ್ಯಾಪಿ ಮುಷ್ಕರದಿಂದ ಬುಧವಾರ ಗ್ರೀಸ್‌ನಾದ್ಯಂತ ಸರ್ಕಾರಿ ಕಚೇರಿಗಳು, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ವಿಮಾನ ಹಾರಾಟ ಸ್ಥಗಿತಗೊಂಡಿದ್ದು ತನ್ನ ಬಜೆಟ್ ಕೊರತೆ ಎದುರಿಸುತ್ತಿರುವ ಸರ್ಕಾರದ ಮೇಲೆ ಒತ್ತಡ ಹೆಚ್ಚಿದೆ.

ದೇಶದ ಅತಿದೊಡ್ಡ ಖಾಸಗಿ ಮತ್ತು ಸಾರ್ವಜನಿಕ ವಲಯದ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದು ಶಾಲೆಗಳು ಮತ್ತು ಸಾರಿಗೆ ಸೇವೆಗಳಲ್ಲಿ ವ್ಯತ್ಯಯ ಕಂಡುಬಂದಿದ್ದು ಆಸ್ಪತ್ರೆಗಳು ಮತ್ತು ಆಂಬುಲೆನ್ಸ್ ಸೇವೆಗಳು ತುರ್ತು ಸಿಬ್ಬಂದಿಗಳಿಂದ ನಡೆಸಲಾಗುತ್ತಿದೆ.

ಸಾರ್ವಜನಿಕ ಮತ್ತು ಖಾಸಗಿ ವಲಯದ ಸಾವಿರಾರು ಮಂದಿ  ನೌಕರರು, ವಿದ್ಯಾರ್ಥಿಗಳು ಮತ್ತು ಪಿಂಚಣಿದಾರರು ಆಥೆನ್ಸ್‌ನಲ್ಲಿ ರ್ಯಾಲಿ ನಡೆಸಿ ಮಿತವ್ಯಯ ನಿಯಮದ ವಿರುದ್ಧ ಸಂಸತ್ ಭವನಕ್ಕೆ ಮೆರವಣಿಗೆಯಲ್ಲಿ ತೆರಳಿದರು.

ಸಾರ್ವಜನಿಕ ವಲಯ ಮತ್ತು ಖಾಸಗಿ  ಯೂನಿಯನ್‌ನಲ್ಲಿ ಒಟ್ಟು 25 ಲಕ್ಷ ಮಂದಿ ನೌಕರರಿದ್ದು ಇದು ಗ್ರೀಸ್‌ನ ಒಟ್ಟು ನೌಕರರ ಸಂಖ್ಯೆಯ ಅರ್ಧದಷ್ಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT