ADVERTISEMENT

ಗ್ವಾಟೆಮಾಲ ಫ್ಯೂಗೊ ಜ್ವಾಲಾಮುಖಿ ಸ್ಫೋಟ: ಮೃತರ ಸಂಖ್ಯೆ 99ಕ್ಕೆ ಏರಿಕೆ

ಪಿಟಿಐ
Published 7 ಜೂನ್ 2018, 1:37 IST
Last Updated 7 ಜೂನ್ 2018, 1:37 IST
ಜ್ವಾಲಾಮುಖಿಯಿಂದ ಹಾನಿಗೊಳಗಾಗಿರುವ ಪ್ರದೇಶದಲ್ಲಿ ಶೋಧ ಕಾರ್ಯ ನಡೆದಿದೆ, ಹೊಗೆಯುಗುಳುತ್ತಿರುವ ಜ್ವಾಲಾಮುಖಿ . ಚಿತ್ರ: ರಾಯಿಟರ್ಸ್
ಜ್ವಾಲಾಮುಖಿಯಿಂದ ಹಾನಿಗೊಳಗಾಗಿರುವ ಪ್ರದೇಶದಲ್ಲಿ ಶೋಧ ಕಾರ್ಯ ನಡೆದಿದೆ, ಹೊಗೆಯುಗುಳುತ್ತಿರುವ ಜ್ವಾಲಾಮುಖಿ . ಚಿತ್ರ: ರಾಯಿಟರ್ಸ್   

ಗ್ವಾಟೆಮಾಲ ಸಿಟಿ: ಫ್ಯೂಗೊ ಜ್ವಾಲಾಮುಖಿ ಸ್ಫೋಟಗೊಂಡ ಬಳಿಕ ಮೃತರ ಸಂಖ್ಯೆ 99ಕ್ಕೆ ಏರಿದೆ.

ಈ ಜ್ವಾಲಾಮುಖಿ ದಕ್ಷಿಣ ಭಾಗದಲ್ಲಿನ ಹಲವು ಹಳ್ಳಿಗಳನ್ನೇ ಸಮಾಧಿ ಮಾಡಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಜ್ವಾಲಾಮುಖಿಯಿಂದ ಸುಟ್ಟು ಕರಕಲಾದ 99 ಮೃತದೇಹಗಳು ಪತ್ತೆಯಾಗಿವೆ. ಅದರಲ್ಲಿ 28 ಜನರ ಗುರುತು ಮಾತ್ರ ಪತ್ತೆಯಾಗಿದೆ ಎಂದು ರಾಷ್ಟ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

3,763 ಮೀಟರ್‌ ಎತ್ತದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡ ನಂತರ 200 ಮಂದಿ ಕಣ್ಮರೆಯಾಗಿದ್ದಾರೆ ಎಂದು ವರದಿಯಾಗಿದೆ.

ಜ್ವಾಲಾಮುಖಿ ಭಾನುವಾರ ಸ್ಫೋಟಗೊಂಡ ಬಳಿಕ, ಸುತ್ತಮುತ್ತಲಿನ ಜನವಸತಿ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಬೂದಿ ಆವರಿಸಿತ್ತು. ಮರಗಿಡ, ವಾಹನ ಮತ್ತು ರಸ್ತೆಗಳು ಬೂದು ಬಣ್ಣಕ್ಕೆ ತಿರುಗಿವೆ. ಬಂಡೆಗಲ್ಲುಗಳು ಉರುಳಿ ಬಿದ್ದಿವೆ.

ಕಣ್ಮರೆಯಾದವರಿಗಾಗಿ ಮತ್ತು ಸಂಕಷ್ಟದಲ್ಲಿ ಸಿಲುಕಿರುವವರಿಗಾಗಿ ರಕ್ಷಣಾ ಪಡೆ ಶೋಧ ಕಾರ್ಯ ಮುಂದುವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.