ADVERTISEMENT

ಚೀನಾಗೆ ಕಿಮ್‌ ಜಾಂಗ್‌ ಉನ್‌ ರಹಸ್ಯ ಭೇಟಿ: ಅಣ್ವಸ್ತ್ರರಹಿತಗೊಳ್ಳಲು ಉತ್ತರ ಕೊರಿಯಾ ಸಿದ್ಧ?

ಏಜೆನ್ಸೀಸ್
Published 28 ಮಾರ್ಚ್ 2018, 6:34 IST
Last Updated 28 ಮಾರ್ಚ್ 2018, 6:34 IST
ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌
ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌   

ಬೀಜಿಂಗ್‌: ಕೊರಿಯಾ ಪೆನಿನ್ಸುಲಾ ಅಣ್ವಸ್ತ್ರರಹಿತಗೊಳಿಸಲು ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ವಾಗ್ದಾನ ನೀಡಿರುವುದಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಬುಧವಾರ ಬಹಿರಂಗ ಪಡಿಸಿದರು.

ಕಳೆದ ಭಾನುವಾರದಿಂದ ಬುಧವಾರದವರೆಗೂ ಉತ್ತರ ಕೊರಿಯಾ ಅಧ್ಯಕ್ಷ ಚೀನಾ ಪ್ರವಾಸ ಕೈಗೊಂಡಿದ್ದನ್ನು ಉಭಯ ರಾಷ್ಟ್ರಗಳು ಸ್ಪಷ್ಟಪಡಿಸಿವೆ.

2011ರಲ್ಲಿ ಅಧಿಕಾರ ವಹಿಸಿದ ನಂತರ ಕಿಮ್‌ ಜಾಂಗ್ ಉನ್‌ ಕೈಗೊಂಡಿದ್ದ ಮೊದಲ ವಿದೇಶ ಪ್ರವಾಸ ಇದಾಗಿದೆ. ಮುಂಬರಲಿರುವ ದಕ್ಷಿಣ ಕೊರಿಯಾ ಮತ್ತು ಅಮೆರಿಕ ಜತೆಗಿನ ಸಭೆಗೆ ಪೂರ್ವ ತಯಾರಿಯಾಗಿ ಈ ಭೇಟಿ ನಡೆದಿರುವುದಾಗಿ ವಿಶ್ಲೇಷಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.