ADVERTISEMENT

ಚೀನಾದೊಂದಿಗೆ ಸಂಘರ್ಷಕ್ಕೆ ಭಾರತ ಸಿದ್ಧವಿಲ್ಲ - ಅಮೆರಿಕದ ಗುಪ್ತದಳ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ವಾಷಿಂಗ್ಟನ್ (ಐಎಎನ್‌ಎಸ್): ಚೀನಾದೊಂದಿಗೆ ಹೆಚ್ಚು ಸಂಘರ್ಷಕ್ಕೆ ಭಾರತದ ಸೇನೆ ಅವಕಾಶ ನೀಡುತ್ತಿಲ್ಲ. ಆ ದೇಶದೊಂದಿಗೆ ಸಂಭವನೀಯ ಯುದ್ಧವನ್ನು ತಪ್ಪಿಸುವುದು ಭಾರತದ ಉದ್ದೇಶವಾಗಿದೆ ಎಂದು ಅಮೆರಿಕದ ಗುಪ್ತದಳದ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಹಾಗೆಯೇ ಪಾಕಿಸ್ತಾನವನ್ನು ಪ್ರಚೋದನೆ ಮಾಡದಿರಲೂ ನಿರ್ಧರಿಸಿದೆ. ಇದಕ್ಕಾಗಿಯೇ ಆಫ್ಘಾನಿಸ್ತಾನಕ್ಕೆ ಹೆಚ್ಚು ಯೋಧರು ಮತ್ತು ಭಾರಿ ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಿಲ್ಲ ಎಂದೂ ಅವರು ನುಡಿದಿದ್ದಾರೆ.

ಆದರೆ ಚೀನಾದ ಗಡಿಯ ಉದ್ದಕ್ಕೂ ಹಾಗೂ ಹಿಂದೂ ಮಹಾಸಾಗರ, ಏಷ್ಯಾ-ಫೆಸಿಪಿಕ್ ಭಾಗದಲ್ಲಿ ಹೆಚ್ಚಿರುವ ಚೀನಾ ಸೈನಿಕರ ಜಮಾವಣೆ ಕುರಿತು ಭಾರತ ಹೆಚ್ಚು ಕಳವಳ ಪಡುತ್ತಿದೆ ಎಂದು ಅಮೆರಿಕ ರಾಷ್ಟ್ರೀಯ ಗುಪ್ತಚರ ಇಲಾಖೆ ನಿರ್ದೇಶಕ ಜೇಮ್ಸ ಕ್ಲಾಪರ್ ಸೆನೆಟ್‌ನ ಸೆಲೆಕ್ಟ್ ಇಂಟಲಿಜೆನ್ಸ್ ಕಮಿಟಿ ಮುಂದೆ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.