ADVERTISEMENT

ಚೀನಾ: ಮತ್ತೊಂದು ಅವಧಿಗೆ ಜಿನ್‌ಪಿಂಗ್‌

ಪಿಟಿಐ
Published 24 ಅಕ್ಟೋಬರ್ 2017, 19:30 IST
Last Updated 24 ಅಕ್ಟೋಬರ್ 2017, 19:30 IST
ಚೀನಾ: ಮತ್ತೊಂದು ಅವಧಿಗೆ ಜಿನ್‌ಪಿಂಗ್‌
ಚೀನಾ: ಮತ್ತೊಂದು ಅವಧಿಗೆ ಜಿನ್‌ಪಿಂಗ್‌   

ಬೀಜಿಂಗ್ (ಪಿಟಿಐ): ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಎರಡನೇ ಅವಧಿಗೆ (ಐದು ವರ್ಷ) ಮುಂದುವರಿಸಲು ಕಮ್ಯುನಿಸ್ಟ್ ಪಕ್ಷ ತೀರ್ಮಾನಿಸಿದೆ.

ಕ್ಸಿ ಅವರ ಹೆಸರು ಹಾಗೂ ಅವರ ತತ್ವಸಿದ್ಧಾಂತವನ್ನು ಸೇರ್ಪಡೆ ಗೊಳಿಸಲು ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ. ಐದು ವರ್ಷಕ್ಕೆ ಒಮ್ಮೆ ಒಂದು ವಾರದ ಅವಧಿಗೆ ನಡೆಯುವ ಪಕ್ಷದ ಸಮಾವೇಶದಲ್ಲಿ, ‘ನೂತನ ಶಕೆಗಾಗಿ ಚೀನಾದ ವಿಶಿಷ್ಟತೆ ಹೊಂದಿರುವ ಸಮಾಜವಾದ’ ಎನ್ನುವ ಕ್ಸಿ ಅವರ ತತ್ವಸಿದ್ಧಾಂತ ಪಕ್ಷದ ಸಂವಿಧಾನಕ್ಕೆ ಸೇರ್ಪಡೆಯಾಗಿದೆ.

ಅಂದಾಜು 2300 ಗಣ್ಯರು ಪಾಲ್ಗೊಂಡಿದ್ದ ಈ ಸಮಾವೇಶದಲ್ಲಿ ಕ್ಸಿ ಅವರ ಅಧಿಕಾರಾವಧಿ ಮುಂದು ವರಿಸಲು ಬೆಂಬಲ ಸೂಚಿಸಲಾಯಿತು.

ADVERTISEMENT

ಸಿಪಿಸಿ ಸದಸ್ಯತ್ವ: ಭಾರತ–ಚೀನಾ ಗಡಿ ಮಾತುಕತೆಯ ವಿಶೇಷ ಪ್ರತಿನಿಧಿಯಾಗಿರುವ ಯಾಂಗ್ ಜೈಚಿ (67) ಅವರನ್ನು ಕಮ್ಯುನಿಸ್ಟ್‌ ಪಕ್ಷದ (ಸಿಪಿಸಿ) ಕೇಂದ್ರೀಯ ಸಮಿತಿ ಸದಸ್ಯರನ್ನಾಗಿ ಚೀನಾ ಆಯ್ಕೆ ಮಾಡಿದೆ. ಯಾಂಗ್ ನಿವೃತ್ತಿ ಕುರಿತು ಇದ್ದ ವದಂತಿ ಈ ಮೂಲಕ ಕೊನೆಗೊಂಡಿದೆ.

ಭಾರತ–ಚೀನಾ ಗಡಿ ಮಾತುಕತೆಯಲ್ಲಿ ಯಾಂಗ್ ಅವರು ಭಾರತದ ಪ್ರತಿನಿಧಿ ಅಜಿತ್ ಡೋಭಾಲ್ ಅವರೊಂದಿಗೆ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.