ಮೆಲ್ಬರ್ನ್, (ಪಿಟಿಐ): ಭಾರತೀಯ ಮೂಲದ ರೂಪದರ್ಶಿಯೊಬ್ಬರು ಆಸ್ಟ್ರೇಲಿಯಾದ ರೂಪದರ್ಶಿಗಳ ಪ್ರಾಯೋಜಕ ಸಂಸ್ಥೆ(ಮಾಡೆಲಿಂಗ್ ಏಜೆನ್ಸಿ) ಯ ವಿರುದ್ಧ ಜನಾಂಗೀಯ ನಿಂದನೆ ಆರೋಪ ಮಾಡಿದ್ದಾರೆ.
ಶ್ವೇತವರ್ಣದವಳು ಅಲ್ಲ ಎಂಬ ಕಾರಣಕ್ಕಾಗಿ ತನ್ನ ಅವಕಾಶಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು 25 ವರ್ಷದ ರೂಪದರ್ಶಿ ಕೇಮಾ ರಾಜೇಂದ್ರನ್ ಪರ್ಥ್ ನಗರದ ಚಾಡ್‌ವಿಕ್ ಮಾಡೆಲಿಂಗ್ ಏಜೆನ್ಸಿ ವಿರುದ್ಧ ಆರೋಪ ಮಾಡಿದ್ದಾರೆ.
ಆಸ್ಟ್ರೇಲಿಯಾದಂತಹ ಬಹು ಸಂಸ್ಕೃತಿಯ ದೇಶದಲ್ಲಿ ಶ್ವೇತವರ್ಣದವಳಲ್ಲ ಎಂಬ ಒಂದೇ ಕಾರಣಕ್ಕಾಗಿ ತನಗೆ ಅವಕಾಶ ನಿರಾಕರಿಸಿ ಏಜೆನ್ಸಿ ಕಳುಹಿಸಿದ ಇ-ಮೇಲ್ ನಿಜಕ್ಕೂ ಅಚ್ಚರಿ ಮೂಡಿಸಿದೆ ಎಂದು ಕೇಮಾ ಸುದ್ದಿಗೋಷ್ಠಿಯಲ್ಲಿ ಆರೋಪಿಸಿರುವುದಾಗಿ ಸ್ಥಳೀಯ ಪತ್ರಿಕೆ ವರದಿ ಮಾಡಿದೆ.
ಆದರೆ, ತನ್ನ ವಿರುದ್ಧ ರೂಪದರ್ಶಿ ಮಾಡಿರುವ ಜನಾಂಗೀಯ ನಿಂದನೆ ಆರೋಪವನ್ನು ಏಜೆನ್ಸಿ ತಳ್ಳಿಹಾಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.