ADVERTISEMENT

ಜಸ್ಟರ್ ನೂತನ ರಾಯಭಾರಿ

ಪಿಟಿಐ
Published 27 ಅಕ್ಟೋಬರ್ 2017, 19:39 IST
Last Updated 27 ಅಕ್ಟೋಬರ್ 2017, 19:39 IST
ಜಸ್ಟರ್ ನೂತನ ರಾಯಭಾರಿ
ಜಸ್ಟರ್ ನೂತನ ರಾಯಭಾರಿ   

ವಾಷಿಂಗ್ಟನ್‌ : ಭಾರತದಲ್ಲಿನ ಅಮೆರಿಕದ ರಾಯಭಾರಿಯಾಗಿ ಕೆನ್‌ ಜಸ್ಟರ್‌ ಅವರನ್ನು ನೇಮಿಸಲು ಸೆನೆಟ್‌ನ ವಿದೇಶಾಂಗ ವ್ಯವಹಾರಗಳ ಸಮಿತಿ ಅನುಮೋದನೆ ನೀಡಿದೆ.

ಅಂತಿಮವಾಗಿ ಸಂಪೂರ್ಣ ಸೆನೆಟ್‌ ಒಪ್ಪಿಗೆ ಸೂಚಿಸಿದ ಬಳಿಕ ಜಸ್ಟರ್‌ ಅವರು ಭಾರತದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.

ಭಾರತ–ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಸಂದರ್ಭದಲ್ಲಿ ಜಸ್ಟರ್‌ ಅವರು ಮಹತ್ವದ ಪಾತ್ರ ವಹಿಸಿದ್ದರು. ಇತ್ತೀಚಿನವರೆಗೂ ಜಸ್ಟರ್‌ ಅವರು ಅಮೆರಿಕ ಅಧ್ಯಕ್ಷರ ಅಂತರರಾಷ್ಟ್ರೀಯ ಆರ್ಥಿಕ ವ್ಯವಹಾರಗಳ ಸಹಾಯಕರಾಗಿ ಮತ್ತು ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು.

ADVERTISEMENT

ಬುಷ್‌ ಅವರ ಆಡಳಿತದಲ್ಲಿ ಅಮೆರಿಕ ಮತ್ತು ಭಾರತದ ಸಂಬಂಧಗಳನ್ನು ಬಲಪಡಿಸುವಲ್ಲಿಯೂ ಜಸ್ಟರ್‌ ಪ್ರಮುಖ ಪಾತ್ರ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.