ADVERTISEMENT

ಜಾಗತಿಕ ತಾಪಮಾನ ಇಳಿಕೆ: ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 19:30 IST
Last Updated 17 ಜನವರಿ 2012, 19:30 IST

ವಾಷಿಂಗ್ಟನ್ (ಐಎಎನ್‌ಎಸ್): ಮಾಲಿನ್ಯ ನಿಯಂತ್ರಣಕ್ಕಾಗಿ ಕೈಗೊಳ್ಳುವ ಪ್ರಮುಖ ಕ್ರಮಗಳಿಂದ ಜಾಗತಿಕ ತಾಪಮಾನವನ್ನು 0.5 ಡಿಗ್ರಿ ಸೆಲ್ಸಿಯಸ್‌ನಷ್ಟು ತಗ್ಗಿಸಬಹುದು, ಭಾರತ, ನೇಪಾಳ ಹಾಗೂ ಬಾಂಗ್ಲಾ ದೇಶಗಳಲ್ಲಿ 135 ದಶಲಕ್ಷ ಟನ್ ಇಳುವರಿ ಹೆಚ್ಚಿಸಬಹುದು, ಸಾವಿರಾರು ಜನನ ಪೂರ್ವ ಮರಣ ತಪ್ಪಿಸಬಹುದು...

ಇಂತಹ ಫಲಿತಾಂಶಕ್ಕಾಗಿ 14 ಪ್ರಮುಖ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನಾಸಾದ ಗೊಡ್ಡಾರ್ಡ್ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯ ವಿಜ್ಞಾನಿ ಡ್ರ್ಯೂ ಶಿಂಡೆಲ್ ಪ್ರತಿಪಾದಿಸಿದ್ದಾರೆ. ಆಸ್ಟ್ರೇಲಿಯಾದ ಇಂಟರ್‌ನ್ಯಾಷನಲ್ ಇನ್ಸ್‌ಟಿಟ್ಯೂಟ್ ಫಾರ್ ಅಪ್ಲೈಡ್ ಸಿಸ್ಟಮ್ಸ ಅನಾಲಿಸಿಸ್ ನಿಗದಿಪಡಿಸಿದ ತಂತ್ರಜ್ಞಾನ ಆಧರಿಸಿ, ಅಂತರ ರಾಷ್ಟ್ರೀಯ ತಂಡ ರಚಿಸಿರುವ 400 ನಿಯಂತ್ರಣ ಮಾನದಂಡಗಳನ್ನು ಮುಂದಿಟ್ಟು ಶಿಂಡೆಲ್ ಈ ಕ್ರಮಗಳನ್ನು ಸಿದ್ಧಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.