ADVERTISEMENT

ಜಾರ್ಜಿಯಾ ಗವರ್ನರ್ ಹುದ್ದೆಯತ್ತ ಕಪ್ಪುವರ್ಣೀಯ ಮಹಿಳೆ

ಏಜೆನ್ಸೀಸ್
Published 24 ಮೇ 2018, 19:26 IST
Last Updated 24 ಮೇ 2018, 19:26 IST
ಸ್ಟೇಸಿ
ಸ್ಟೇಸಿ   

ಅಟ್ಲಾಂಟಾ (ಎಪಿ): ವಕೀಲರಾದ ಸ್ಟೇಸಿ ಅಬ್ರಾಮ್ಸ್ ಅವರು ಜಾರ್ಜಿಯಾದ ಗವರ್ನರ್ ಆಗುವತ್ತ ಹೆಜ್ಜೆ ಇಟ್ಟಿದ್ದಾರೆ. ಇವರು ಅಮೆರಿಕದ ಇತಿಹಾಸದಲ್ಲಿ ಜಾರ್ಜಿಯಾದಲ್ಲಿ ಈ ಹುದ್ದೆಗೆ ಏರಲಿರುವ ಮೊದಲ ಕಪ್ಪುವರ್ಣೀಯ ಮಹಿಳೆ ಆಗಲಿದ್ದಾರೆ.

ಹುದ್ದೆ ಮೇಲೆ ಕಣ್ಣಿಟ್ಟಿದ್ದ ಹಲವು ಮಹಿಳೆಯರ ಪೈಕಿ, ಸ್ಟೇಸಿ ಅವರನ್ನು ಡೆಮಾಕ್ರಟಿಕ್ ಪಕ್ಷದವರು ಆಯ್ಕೆ ಮಾಡಿಕೊಂಡಿದ್ದಾರೆ.

ಮಂಗಳವಾರ ನಡೆದ ಪ್ರಾಥಮಿಕ ಚುನಾವಣೆಯಲ್ಲಿ 44 ವರ್ಷದ ಸ್ಟೇಸಿ ಅವರು ಸ್ಟೇಸಿ ಇವಾನ್ಸ್ ವಿರುದ್ಧ ಜಯ ಸಾಧಿಸಿ, ಗವರ್ನರ್ ಹುದ್ದೆಗೆ ನಾಮ ನಿರ್ದೇಶನಗೊಂಡಿದ್ದಾರೆ.

ADVERTISEMENT

ಕೆಂಟುಕಿ, ಅರ್ಕಾನ್ಸಾಸ್ ಹಾಗೂ ಟೆಕ್ಸಾಸ್ ರಾಜ್ಯಗಳಲ್ಲಿಯೂ ನವೆಂಬರ್ ಮಧ್ಯಭಾಗದಲ್ಲಿ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.