
ಪ್ರಜಾವಾಣಿ ವಾರ್ತೆಕಠ್ಮಂಡು (ಪಿಟಿಐ): ಮುಂಬೈ–ಕಠ್ಮಂಡು ನಡುವಿನ ಜೆಟ್ ಏರ್‌ವೇಸ್ ವಿಮಾನಕ್ಕೆ ಪಕ್ಷಿಯೊಂದು ಬಡಿದ ಕಾರಣ ತುರ್ತಾಗಿ ಭೂಸ್ಪರ್ಶ ಮಾಡಿರುವ ಘಟನೆ ಇಲ್ಲಿ ಸೋಮವಾರ ನಡೆದಿದೆ.
‘ಜೆಟ್ ಏರ್‌ವೇಸ್‌ನ 9ಡಬ್ಲ್ಯೂ268 ವಿಮಾನಕ್ಕೆ ಇಲ್ಲಿಗೆ ಸಮೀಪ ಹಕ್ಕಿಯೊಂದು ಬಡಿದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. 125 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯಿದ್ದ ವಿಮಾನವನ್ನು ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು’ ಎಂದು ಜೆಟ್ ಏರ್‌ವೇಸ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.