ADVERTISEMENT

ಟರ್ಕಿಯಲ್ಲಿ ರಾಜಕೀಯ ಅಸ್ಥಿರತೆ

ಬಹುಮತ ಕಳೆದುಕೊಂಡ ಆಡಳಿತ ಪಕ್ಷ

​ಪ್ರಜಾವಾಣಿ ವಾರ್ತೆ
Published 8 ಜೂನ್ 2015, 19:30 IST
Last Updated 8 ಜೂನ್ 2015, 19:30 IST
ಟರ್ಕಿಯ ಇಸ್ತಾಂಬುಲ್‌ನಲ್ಲಿ ಸಂಭ್ರಮಾಚರಣೆ ನಡೆಸಿದ ಪೀಪಲ್ಸ್ ಡೆಮಾಕ್ರಟಿಕ್‌ ಪಕ್ಷದ ಕಾರ್ಯಕರ್ತರು     - ರಾಯಿಟರ್ಸ್‌ ಚಿತ್ರ
ಟರ್ಕಿಯ ಇಸ್ತಾಂಬುಲ್‌ನಲ್ಲಿ ಸಂಭ್ರಮಾಚರಣೆ ನಡೆಸಿದ ಪೀಪಲ್ಸ್ ಡೆಮಾಕ್ರಟಿಕ್‌ ಪಕ್ಷದ ಕಾರ್ಯಕರ್ತರು - ರಾಯಿಟರ್ಸ್‌ ಚಿತ್ರ   

ಇಸ್ತಾಂಬುಲ್‌(ಎಎಫ್‌ಪಿ): ಟರ್ಕಿ ಅಧ್ಯಕ್ಷ ರಿಸೆಪ್‌ ತಯ್ಯಿಪಿ ಎರ್ಡೊಗನ್‌ ಅವರ ಪಕ್ಷ ಸಂಸತ್ತಿನಲ್ಲಿ ಬಹುಮತ ಕಳೆದು ಕೊಂಡಿದ್ದು, ರಾಜಕೀಯ  ಅಸ್ಥಿರತೆ  ಸೃಷ್ಟಿಯಾಗಿದೆ. 2002ರಲ್ಲಿ ಪಕ್ಷ ಮೊದಲ ಬಾರಿ ಅಧಿಕಾರಕ್ಕೆ ಬಂದ ನಂತರ ಈ ವರೆಗೆ ಬಹುಮತ ಹೊಂದಿತ್ತು.
 
ಹಠಾತ್‌ ರಾಜಕೀಯ ಪ್ರಕ್ಷುಬ್ಧ ಪರಿಸ್ಥಿತಿ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ. ಷೇರು ಮಾರುಕಟ್ಟೆ ಯಲ್ಲಿ ಬೆಳಗ್ಗೆಯಿಂದಲೇ  ಏರಿಳಿತ ಕಂಡು ಬಂತು. ಇದೇ ವೇಳೆ ಡಾಲರ್‌ ಎದುರು ಟರ್ಕಿ ಲಿರಾ ಮೌಲ್ಯ ಕುಸಿಯತೊಡಗಿತು.

ಟರ್ಕಿ ರಾಜಕೀಯದಲ್ಲಿ ಕಳೆದ 13 ವರ್ಷಗಳಿಂದ ಜಸ್ಟೀಸ್ ಅಂಡ್ ಡೆವಲಪ್‌ ಮೆಂಟ್‌ ಪಾರ್ಟಿ (ಎಕೆಪಿ)  ಆಧಿಪತ್ಯ ಸ್ಥಾಪಿ ಸಿತ್ತು. ಆದರೆ ಭಾನುವಾರ ನಡೆದ ಚುನಾ ವಣೆಯಲ್ಲಿ ಬಹುಮತ ಕೊರತೆ ಅನು ಭವಿಸಿತು. ಕುರ್ದಿಸ್‌್ ಪರವಾದ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿಯ ಅನಿರೀಕ್ಷಿತ ಮುನ್ನಡೆ ಈಗ ಅತಂತ್ರ ಸ್ಥಿತಿ ಸೃಷ್ಟಿಸಿದೆ.  

ಇದೀಗ ಮೈತ್ರಿ ಸರ್ಕಾರ ಇಲ್ಲವೇ ಅಲ್ಪಮತದ ಸರ್ಕಾರ ಅಥವಾ ಅವಧಿಗೂ ಮುನ್ನವೇ ಚುನಾವಣೆ ಉಳಿದಿರುವ ದಾರಿಗಳು ಎನ್ನಲಾಗುತ್ತಿದೆ. ಸರ್ಕಾರದ ಅಧಿಕೃತ ಫಲಿತಾಂಶದ ಪ್ರಕಾರ ಶೇ 99.99 ಮತ ಎಣಿಕೆ ಮುಗಿದಿದ್ದು, ಎಕೆಪಿ ಶೇ 41 ರಷ್ಟು ಮತ ಪಡದಿದೆ.

ನಂತರದ ಸ್ಥಾನದಲ್ಲಿ ರಿಪ ಬ್ಲಿಕನ್‌ ಪೀಪಲ್ಸ್ ಪಾರ್ಟಿ (ಶೇ 25) ಇದೆ. ನ್ಯಾಷನಲಿಸ್ಟ್‌ ಮೂವ್‌ಮೆಂಟ್‌ ಪಾರ್ಟಿ ಶೇ 16.6 ಮತ ಪಡೆದಿದ್ದರೆ ಶೇ 13 ಮತ ಪಡೆದು ಎಚ್‌ಡಿಪಿ ನಾಲ್ಕನೇ ಸ್ಥಾನದಲ್ಲಿದೆ. 2011 ರಲ್ಲಿ ನಡೆದ ಚುನಾವಣೆಯಲ್ಲಿ ಎಕೆಪಿ ಶೇ 50ರಷ್ಟು ಮತಗಳನ್ನು ಪಡೆದಿತ್ತು. 

ತಮ್ಮ ಪಕ್ಷ ಬಹುಮತ ಕಳೆದುಕೊಂಡಿ ರುವ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ಈವರೆಗೆ ಅಧ್ಯಕ್ಷ ಎರ್ಡೊಗನ್‌ ನೀಡಿಲ್ಲ.  ಸೋಮವಾರ ಅವರು ಯಾವುದೇ ಸಭೆ ಇಲ್ಲವೇ ಸಮಾರಂಭದಲ್ಲಿ ಭಾಗವಹಿಸಿಲ್ಲ. ಫಲಿತಾಂಶದ ನಂತರ ಪ್ರಧಾನಿ ಅಹಮದ್‌್್ ದವೊಟೊಗು ಸಹ ಒತ್ತಡದ ಲ್ಲಿದ್ದು, ಅಂಕಾರದಲ್ಲಿ ಸಂಪುಟ ಸಭೆ ನಡೆಸಿದರು.

ಅಧ್ಯಕ್ಷೀಯ ಪದ್ಧತಿಗೆ ಹಿನ್ನಡೆ: ಟರ್ಕಿ ಯನ್ನು ಸಂಸದೀಯ ಪ್ರಜಾಸತ್ತೆಯಿಂದ ಅಧ್ಯಕ್ಷೀಯ ವ್ಯವಸ್ಥೆಗೆ ಬದಲಾಯಿಸುವ ಚಿಂತನೆಯನ್ನು ಎರ್ಡೊಗನ್‌ ಹೊಂದಿ ದ್ದರು. ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡುವುದು ಅವರ ಆಕಾಂಕ್ಷೆಯಾಗಿತ್ತು. ಈ ಚಿಂತನೆಗೆ ಈಗ ಹಿನ್ನಡೆಯಾಗಿದೆ. ವ್ಯವಸ್ಥೆ ಬದಲಾವಣೆಗೆ ಸಂವಿಧಾನ ತಿದ್ದು ಪಡಿ ಅಗತ್ಯ ಇದೆ. ಸಂವಿಧಾನ ತಿದ್ದು ಪಡಿಗೆ ಮೂರನೇ ಎರಡು ಬಹುಮತ ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.