ADVERTISEMENT

ಟಿ.ವಿ. ನೋಡುತ್ತಾ ಆಹಾರ ಸೇವಿಸದಿರಿ..!

​ಪ್ರಜಾವಾಣಿ ವಾರ್ತೆ
Published 15 ಮೇ 2012, 19:30 IST
Last Updated 15 ಮೇ 2012, 19:30 IST
ಟಿ.ವಿ. ನೋಡುತ್ತಾ ಆಹಾರ ಸೇವಿಸದಿರಿ..!
ಟಿ.ವಿ. ನೋಡುತ್ತಾ ಆಹಾರ ಸೇವಿಸದಿರಿ..!   

ವಾಷಿಂಗ್ಟನ್ (ಐಎಎನ್‌ಎಸ್): ನಿಮ್ಮ ಮಕ್ಕಳು `ಆರೋಗ್ಯಪೂರ್ಣ ಆಹಾರ ಸೇವಿಸಬೇಕೇ ?~ ಹಾಗಾದರೆ ಅವರನ್ನು ಟಿ.ವಿ. ನೋಡುತ್ತಾ ಆಹಾರ ಸೇವಿಸುವುದನ್ನು ತಪ್ಪಿಸಿಬಿಡಿ !

`ಟಿ.ವಿ. ನೋಡುತ್ತಾ ಆಹಾರ ಸೇವಿಸುವುದರಿಂದ, ಆಹಾರ ಸೇವನೆಯ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತದೆ. ಇದು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ~ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಈ ಸಮಸ್ಯೆ ಮಕ್ಕಳಷ್ಟೇ ಅಲ್ಲ, ಎಲ್ಲ ವಯೋಮಾನದವರಿಗೂ ಅನ್ವಯಿಸುತ್ತದೆ.

ಟಿ.ವಿ. ನೋಡುತ್ತಾ ಆಹಾರ ಸೇವಿಸುತ್ತಿದ್ದರೆ, ಗಮನ ಟಿ.ವಿಯಲ್ಲಿನ ಚಿತ್ರದೆಡೆಗೆ ಹರಿಯುತ್ತದೆ. ಆಹಾರ ಸೇವನೆ ನಿಧಾನವಾಗಬಹುದು. ಇಲ್ಲವೇ ವೇಗವಾಗಬಹುದು. ಈ ಪ್ರಕ್ರಿಯೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ADVERTISEMENT

ಯುವಕರಲ್ಲಿ ಈ ಸಮಸ್ಯೆ ಹೆಚ್ಚಾಗುತ್ತಿದೆ. ಟಿ.ವಿ.ನೋಡುತ್ತಾ ತಿನ್ನುವ ಆಹಾರದ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ಪರಿಣಾಮ ಬೊಜ್ಜು ಹೆಚ್ಚಾಗುವ ಜೊತೆಗೆ, ಮಾರಣಾಂತಿಕ ಕಾಯಿಲೆಗಳು ಹರಡಲು ಕಾರಣವಾಗುತ್ತದೆ ಎಂದು ರಾಷ್ಟ್ರೀಯ ಸಮೀಕ್ಷೆಯೊಂದು ತಿಳಿಸಿದೆ.

ಬೆಥೆಸ್ಡ್‌ನಲ್ಲಿರುವ ಇಯುನೈಸ್ ಕೆನಡಿ  ಶ್ರಿವರ್ ರಾಷ್ಟ್ರೀಯ ಮಕ್ಕಳ ಆರೋಗ್ಯ ಮತ್ತು ಮಾನವ ಅಭಿವೃದ್ಧಿ ಸಂಸ್ಥೆಯ ಲೇಹ್ ಎಂ.ಲಿಪ್ಸಕಿ ಮತ್ತು ರೊನಾಲ್ಡ್ ಜೆ. ಇಯಾನ್ನೊಟ್ಟಿ ಅವರು ಟಿ.ವಿ. ವೀಕ್ಷಿಸುತ್ತಾ ಆಹಾರ ಸೇವಿಸುವಾಗ ಅಮೆರಿಕದಲ್ಲಿರುವ ಹದಿಹರೆಯದವರಲ್ಲಿ ಉಂಟಾಗುವ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.