ADVERTISEMENT

ಟ್ಚೀಟ್‌ ವಿವಾದ: ಬಾಣಸಿಗ ವಜಾ

ಪಿಟಿಐ
Published 13 ಜೂನ್ 2018, 19:30 IST
Last Updated 13 ಜೂನ್ 2018, 19:30 IST

ದುಬೈ: ಇಸ್ಲಾಂ ವಿರೋಧಿ ಟ್ವೀಟ್‌ ಮಾಡಿದ್ದ ಜೆಡಬ್ಲ್ಯೂ ಮ್ಯಾರಿಯಟ್‌ ಮ್ಯಾರ್ಕ್ವಿಸ್‌ ಹೋಟೆಲ್‌ನ ಮುಖ್ಯ ಬಾಣಸಿಗ ಅತುಲ್‌ ಕೊಚ್ಚಾರ್‌ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಟೀಕಿಸಿ ಅತುಲ್‌ ಅವರು ಪೋಸ್ಟ್‌ ಮಾಡಿದ್ದ ಟ್ವೀಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

‘ಅತುಲ್‌ ಅವರ ಇತ್ತೀಚಿನ ಹೇಳಿಕೆಗಳನ್ನು ಗಮನಿಸಿ ಅತುಲ್‌ ಜತೆ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನು ಅಂತ್ಯಗೊಳಿಸಲು ನಿರ್ಧರಿಸಲಾಗಿದೆ’ ಎಂದು ಹೋಟಲ್‌ನ ಪ್ರಧಾನ ವ್ಯವಸ್ಥಾಪಕ ಬಿಲ್‌ ಕೆಫೆರ್‌ ತಿಳಿಸಿದ್ದಾರೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿರುವ ಅತುಲ್‌, ‘ಹೋಟೆಲ್‌ ಆಡಳಿತ ಮಂಡಳಿಯ ನಿರ್ಧಾರ ತೀವ್ರ ನೋವು ತಂದಿದೆ. ದುಬೈನಲ್ಲಿನ ಸ್ನೇಹಿತರು ಮತ್ತು ಹಿತೈಷಿಗಳು ನನ್ನನ್ನು ಕ್ಷಮಿಸುವ ವಿಶ್ವಾಸವಿದೆ. ಭವಿಷ್ಯದಲ್ಲೂ ನನ್ನನ್ನು ಬೆಂಬಲಿಸುತ್ತಾರೆ ಎನ್ನುವ ಆಶಾವಾದ ಇದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.