ಜೊಹಾನ್ಸ್‌ಬರ್ಗ್ (ಎಎಫ್‌ಪಿ): ದಕ್ಷಿಣ ಆಫ್ರಿಕದ ಮಹಾನ್ ನಾಯಕ ನೆಲ್ಸನ್ ಮಂಡೇಲಾ ಅವರು ನಿಧನರಾಗಿದ್ದಾರೆ ಎಂಬ ‘ಸುಳ್ಳು ಸುದ್ದಿ’ ಟ್ವಿಟರ್‌ನಲ್ಲಿ ಭಾನುವಾರ ಪ್ರಕಟವಾಗಿ ಭಾರಿ ಕೋಲಾಹಲ ಉಂಟಾಗಿತ್ತು.
92 ವರ್ಷದ ಮಂಡೇಲಾ ಅವರ ಆರೋಗ್ಯ ಚೆನ್ನಾಗಿದ್ದು, ಸದ್ಯ ವಿಶ್ರಾಂತಿಯಲ್ಲಿದ್ದಾರೆ ಎಂದು ನೆಲ್ಸನ್ ಮಂಡೇಲಾ ಪ್ರತಿಷ್ಠಾನದ ಸೆಲ್ಲೊ ಹತಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇಂತಹ ಸುಳ್ಳು ಸುದ್ದಿ ಪ್ರಕಟವಾಗಿದ್ದಕ್ಕೆ ನೂರಾರು ಮಂದಿ ಖಾರವಾಗಿಯೇ ಪ್ರತಿಕ್ರಿಯಿಸಿದ್ದು, ಟ್ವಿಟರ್ ಈಚಿನ ದಿನಗಳಲ್ಲಿ ಹಲವಾರು ಸಾವಿನ ತಮಾಷೆಗಳ ತಾಣವಾಗತ್ತಿವೆ ಎಂದು ಲೇವಡಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.