ADVERTISEMENT

ಡಯಾನಾ ಹತ್ಯೆ ಆರೋಪ ಅಲ್ಲಗಳೆದ ಬ್ರಿಟನ್‌ ಪೊಲೀಸ್‌

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 19:30 IST
Last Updated 17 ಡಿಸೆಂಬರ್ 2013, 19:30 IST
ಡಯಾನಾ ಹತ್ಯೆ ಆರೋಪ ಅಲ್ಲಗಳೆದ ಬ್ರಿಟನ್‌ ಪೊಲೀಸ್‌
ಡಯಾನಾ ಹತ್ಯೆ ಆರೋಪ ಅಲ್ಲಗಳೆದ ಬ್ರಿಟನ್‌ ಪೊಲೀಸ್‌   

ಲಂಡನ್‌ (ಪಿಟಿಐ): ಬ್ರಿಟನ್‌ ಯುವ ರಾಣಿ ಡಯಾನಾ  ಅವರನ್ನು ಕೊಲೆ ಮಾಡಲಾಯಿತು ಎಂಬ ಆಪಾದನೆಯನ್ನು ಅಲ್ಲಗಳೆದಿರುವ ಸ್ಕಾಟ್ಲೆಂಡ್‌ ಯಾರ್ಡ್‌ ಪೊಲೀಸರು, ಈ ಆಪಾದನೆಯನ್ನು ಪುಷ್ಟೀಕರಿಸುವಂತಹ ವಿಶ್ವಾಸಾರ್ಹವಾದ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಮಂಗಳವಾರ ಹೇಳಿದ್ದಾರೆ.

1997ರಲ್ಲಿ ಪ್ಯಾರಿಸ್‌ನ ಸುರಂಗ ಮಾರ್ಗದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಡಯಾನಾ ಮತ್ತು ಅವರ ಸಂಗಾತಿ ದೋದಿ ಅಲ್‌ಫಯಾದ್‌ ಅವರು ಸಾವನ್ನಪ್ಪಿದ್ದರು. ಇದರ ಹಿಂದೆ ಬ್ರಿಟನ್ನಿನ ವಿಶೇಷ ಪಡೆ ಕೈವಾಡ ಇದೆ.  ಎಂದು  ಬ್ರಿಟನ್ನಿನ ವಿಶೇಷ ವಾಯಪಡೆ ಸೇವೆಯ (ಎಸ್‌ಎಎಸ್‌) ಮಾಜಿ ಯೋಧನ ಪತ್ನಿ ದೂರಿದ್ದರು.

ಈ ಆಪಾದನೆ ಬಗ್ಗೆ ಪ್ರಕಟವಾದ ಮಾಧ್ಯಮದ ವರದಿಗಳನ್ನು ಬ್ರಿಟನ್‌ ಮೆಟ್ರೊಪಾಲಿಟನ್‌ ಪೊಲೀಸರು ಪರಿಶೀಲಿಸಿದ್ದಾರೆ. ಆಪಾದನೆಯಲ್ಲಿ ಹುರುಳಿಲ್ಲದ ಕಾರಣ ಈ ಕುರಿತು ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಸ್ಕಾಟ್ಲೆಂಡ್‌ ಪೊಲೀಸರ ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.