ADVERTISEMENT

ಡೈನಾಸಾರ್ ಅವಶೇಷ ಪತ್ತೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 19:30 IST
Last Updated 25 ಜನವರಿ 2011, 19:30 IST

ವಾಷಿಂಗ್ಟನ್ (ಪಿಟಿಐ): ವಿಶ್ವದ ಮೊದಲ ‘ಒಂದು ಬೆರಳಿನ ಕೈಗಳು’ ಹೊಂದಿದ್ದ  ಡೈನಾಸಾರ್ ಅವಶೇಷವನ್ನು ಪಳೆಯುಳಿಕೆ ತಜ್ಞರು ಸಂಶೋಧಿಸಿದ್ದಾರೆ.
ಈ ಡೈನಾಸಾರ್‌ಗಳು ಕೀಟಭಕ್ಷಕಗಳಾಗಿದ್ದವು. ಇವುಗಳ ಎರಡೂ ಕೈಗಳಲ್ಲಿ ಒಂದೊಂದೇ ಬೆರಳುಗಳು ಕಂಡುಬಂದಿರುವುದು ವಿಶೇಷವಾಗಿದೆ.

ಇವುಗಳು ಸುಮಾರು 15 ಅಂಗುಲ ಉದ್ದ, 450 ಗ್ರಾಂ  ತೂಕ ಹೊಂದಿದ್ದುವು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.ಈ ಪ್ರಾಚೀನ ಪ್ರಾಣಿಗಳ ಪಳೆಯುಳಿಕೆಯ ಮಾದರಿ 2008ರಲ್ಲಿ ಮೊದಲ ಬಾರಿಗೆ ಮಂಗೋಲಿಯಾ ನಗರದಲ್ಲಿ ನಡೆದ ಉತ್ಖನನದ ಸಂದರ್ಭದಲ್ಲಿ ಲಭಿಸಿತ್ತು.

ಈ ಕಾರಣದಿಂದ ಇದನ್ನು ‘ಲಿನೆನಿಕಸ್ ಮಾನೊಡಾಕ್ಸಿಲಸ್’ ಎಂದು ಹೆಸರಿಸಲಾಗಿತ್ತು.‘ಲಿನೆನಿಕಸ್’ ಊರಿನ ಹೆಸರಾಗಿದ್ದರೆ, ‘ಮಾನೊಡಾಕ್ಸಿಲಸ್’ ಎಂದರೆ  ‘ಒಂದೇ ಬೆರಳಿನ ಕೈ’ ಇರುವ ಪ್ರಾಣಿ ಎಂಬ ಅರ್ಥವನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.