ADVERTISEMENT

ತರಬೇತಿ ನೀಡಲು ಪಾಕಿಸ್ತಾನಕ್ಕೆ ಬಂದ ಚೀನಾ ನೌಕೆಗಳು

ಏಜೆನ್ಸೀಸ್
Published 11 ಜೂನ್ 2017, 13:40 IST
Last Updated 11 ಜೂನ್ 2017, 13:40 IST
ತರಬೇತಿ ನೀಡಲು ಪಾಕಿಸ್ತಾನಕ್ಕೆ ಬಂದ ಚೀನಾ ನೌಕೆಗಳು
ತರಬೇತಿ ನೀಡಲು ಪಾಕಿಸ್ತಾನಕ್ಕೆ ಬಂದ ಚೀನಾ ನೌಕೆಗಳು   

ಕರಾಚಿ: ಚೀನಾದ ನೌಕಾಪಡೆಯ ಮೂರು ಯುದ್ಧ ನೌಕೆಗಳು ಪಾಕಿಸ್ತಾನ ನೌಕಾಪಡೆಗೆ ತರಬೇತಿ ನೀಡುವ ಉದ್ದೇಶದಿಂದ ಶನಿವಾರ ಇಲ್ಲಿಗೆ ಬಂದಿವೆ.

ಚೀನಾದ ಪೂರ್ವ ಕರಾವಳಿ ನೌಕಾಪಡೆಯ ಕಮಾಂಡರ್‌ ಶೇನ್‌ ಹೋ ನೇತೃತ್ವದಲ್ಲಿ ಬಂದ ತಂಡವನ್ನು ಪಾಕಿಸ್ತಾನ ನೌಕಾಪಡೆಯ ಉನ್ನತ ಅಧಿಕಾರಿಗಳು ಮತ್ತು ಚೀನಾ ರಾಯಭಾರ ಕಚೇರಿಯ ಅಧಿಕಾರಿಗಳು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.

‘ಎರಡೂ ರಾಷ್ಟ್ರಗಳ ನಡುವಣ ಸ್ನೇಹ–ಸಂಬಂಧವನ್ನು ಉತ್ತಮ ಪಡಿಸುವುದು ನಮ್ಮ ಭೇಟಿಯ ಉದ್ದೇಶ’ ಎಂದು ಶೇನ್‌ ಹೇಳಿರುವುದಾಗಿ ಚೀನಾ ಸುದ್ದಿ ಸಂಸ್ಥೆ ‘ಕ್ಸಿನ್‌ಹುವೊ’ ವರದಿ ಮಾಡಿದೆ.

ADVERTISEMENT

‘ಉಭಯ ದೇಶಗಳ ನಡುವಿನ ಮಾತುಕತೆ ಮತ್ತು ಸಹಕಾರಗಳು ಪ್ರಾದೇಶಿಕ ಸ್ಥಿರತೆ ಹಾಗೂ ವಿಶ್ವ ಶಾಂತಿಯನ್ನು ಕಾಪಾಡಲು ಮಹತ್ವದ ಕೊಡುಗೆ ನೀಡಲಿವೆ’ ಎಂದು ಸಹ ಶೇನ್‌ ಹೇಳಿಕೊಂಡಿದ್ದಾರೆ.

ಶೇನ್ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದ ಪಾಕಿಸ್ತಾನ ನೌಕಾಪಡೆಯ ಮುಖ್ಯಸ್ಥ ಮುಹಮ್ಮದ್‌ ಜಕವುಲ್ಲಾ, ‘ಪಾಕಿಸ್ತಾನ–ಚೀನಾ ನಡುವಿನ ಸ್ನೇಹ ಮೌಲ್ಯಯುತವಾದದ್ದಾಗಿದ್ದು, ಈ ಭೇಟಿ ಎರಡೂ ದೇಶಗಳ ನಡುವಿನ ಸಹಕಾರದ ಮುಂದುವರಿಕೆಗೆ ಸಾಕ್ಷಿಯಾಗಿರಲಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಜತೆಗೆ ಎರಡೂ ರಾಷ್ಟ್ರಗಳ ನೌಕೆಗಳನ್ನು ಪರಸ್ಪರ ಸಹಯೋಗದಲ್ಲಿ ತಮ್ಮ ಕಾರ್ಯಗಳಲ್ಲಿ ಬಳಸಿಕೊಳ್ಳುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.