ADVERTISEMENT

ತಾರೆಯರ ಮೇಲೆ ಅತ್ಯಾಚಾರ ಪ್ರಕರಣ: ಹಾಲಿವುಡ್‌ ನಿರ್ಮಾಪಕ ಹಾರ್ವೆ ವೈನ್‌ಸ್ಟೀನ್‌ ಬಂಧನ

ಏಜೆನ್ಸೀಸ್
Published 25 ಮೇ 2018, 14:25 IST
Last Updated 25 ಮೇ 2018, 14:25 IST
ಸಿನಿಮಾ ನಿರ್ಮಾಪಕ, ಮಿರಾ ಮ್ಯಾಕ್ಸ್‌ ಸ್ಟುಡಿಯೊದ ಸಹ ಸಂಸ್ಥಾಪಕ ಹಾರ್ವೆ ವೈನ್‌ಸ್ಟೀನ್‌ನನ್ನು ಪೊಲೀಸರು ಶುಕ್ರವಾರ ಬಂಧಿಸಿದರು. ಚಿತ್ರ: ರಾಯಿಟರ್ಸ್
ಸಿನಿಮಾ ನಿರ್ಮಾಪಕ, ಮಿರಾ ಮ್ಯಾಕ್ಸ್‌ ಸ್ಟುಡಿಯೊದ ಸಹ ಸಂಸ್ಥಾಪಕ ಹಾರ್ವೆ ವೈನ್‌ಸ್ಟೀನ್‌ನನ್ನು ಪೊಲೀಸರು ಶುಕ್ರವಾರ ಬಂಧಿಸಿದರು. ಚಿತ್ರ: ರಾಯಿಟರ್ಸ್   

ನ್ಯೂಯಾರ್ಕ್‌: ಹಾಲಿವುಡ್‌ ತಾರೆಯರ ಮೇಲೆ ಅತ್ಯಾಚಾರ ಮಾಡಿದ ಹಾಗೂ ಲೈಂಗಿಕ ದೌರ್ಜನ್ಯ ಎಸಗಿರುವ ಗಂಭೀರ ಆರೋಪ ಎದುರಿಸುತ್ತಿದ್ದ ಅಮೆರಿಕದ ಸಿನಿಮಾ ನಿರ್ಮಾಪಕ, ಮಿರಾ ಮ್ಯಾಕ್ಸ್‌ ಸ್ಟುಡಿಯೊದ ಸಹ ಸಂಸ್ಥಾಪಕ ಹಾರ್ವೆ ವೈನ್‌ಸ್ಟೀನ್‌ನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದು, ಅವರ ವಿರುದ್ಧ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊರಿಸಲಾಗಿದೆ.

ಜಗತ್ತಿನಾದ್ಯಂತ #MeToo ಅಭಿಯಾನದ ಮೂಲಕ ವ್ಯಾಪಕ ಟೀಕೆ, ಪ್ರತಿರೋಧಗಳು ವ್ಯಕ್ತವಾದ ಎಂಟು ತಿಂಗಳ ಬಳಿಕ ಹಾರ್ವೆ ವೈನ್‌ಸ್ಟೀನ್‌ರನ್ನು ಬಂಧಿಸಲಾಗಿದೆ.

ಇಬ್ಬರು ಮಹಿಳೆಯರ ಮೇಲೆ ಪ್ರತ್ಯೇಕವಾಗಿ ನಡೆದ ಅತ್ಯಾಚಾರ ಘಟನೆ ಸಂಬಂಧ ಲೈಂಗಿಕ ಅಪರಾಧ, ಲೈಂಗಿಕ ದುರುಪಯೋಗ ಮತ್ತು ಲೈಂಗಿಕ ದುರುಪಯೋಗದ ಆರೋಪಗಳ ಮೇಲೆ ಬಂಧಿಸಲಾಯಿತು ಎಂದು ನ್ಯೂಯಾರ್ಕ್‌ ಮಹಿಳಾ ಪೊಲೀಸ್‌ ಇಲಾಖೆ ಸಂಕ್ಷಿಪ್ತವಾಗಿ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.