ADVERTISEMENT

ತೂಕ ನಿಯಂತ್ರಿಸುವ ಪಿತ್ತಜನಕಾಂಗ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2012, 19:30 IST
Last Updated 25 ಏಪ್ರಿಲ್ 2012, 19:30 IST

ಮೆಲ್ಬರ್ನ್ (ಪಿಟಿಐ): ಮೆದುಳಿಗೆ ಸಂದೇಶ ಸೂಚಿಯಾಗಿರುವ ಪಿತ್ತಜನಕಾಂಗವು ತೂಕವನ್ನು ನಿಯಂತ್ರಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದಿರುವ ಆಸ್ಟ್ರೇಲಿಯದ ವಿಜ್ಞಾನಿಗಳು ಇದು ದೇಹದ ಬೊಜ್ಜನ್ನು ಸಹ ನಿಯಂತ್ರಿಸುತ್ತದೆ ಎಂದು ಹೇಳಿದ್ದಾರೆ.

ಕೊಬ್ಬಿನಂಶದ ಆಹಾರ ಪದಾರ್ಥದಿಂದ ಉಂಟಾಗುವ ಮಿತಿಮೀರಿದ ತೂಕವನ್ನು ನಿಯಂತ್ರಿಸುವ ವ್ಯವಸ್ಥೆ ಮನುಷ್ಯರ ದೇಹದಲ್ಲಿ ಇದೆ ಎಂದು ಮೇಲ್ಬರ್ನ್ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ. 

ದೇಹದಲ್ಲಿ ಬೊಜ್ಜು ಆಹಾರ ಹೆಚ್ಚಾದಾಗ ಪಿತ್ತಜನಕಾಂಗದಲ್ಲಿನ ಕಿಣ್ವಗಳು ಹೆಚ್ಚುತ್ತವೆಯಲ್ಲದೇ, ಅವುಗಳು ವಂಶವಾಹಿಗಳನ್ನು ಉತ್ತೇಜಿಸುವ ಅಂಶವನ್ನು ಕಡಿಮೆಗೊಳಿಸುವಂತೆ ಮೆದುಳಿಗೆ ಸೂಚನೆಯನ್ನು ನೀಡುತ್ತವೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.