ADVERTISEMENT

ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ತೀವ್ರ ಉಷ್ಣಾಂಶ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 19:30 IST
Last Updated 21 ಜನವರಿ 2011, 19:30 IST

ಜಿನೀವಾ (ಪಿಟಿಐ): 2010ನೇ ವರ್ಷ ಅತೀ ಹೆಚ್ಚು ಉಷ್ಣಾಂಶವನ್ನು ದಾಖಲಿಸಿದ್ದು, ಭಾರತ ಹಾಗೂ ಇತರ ದಕ್ಷಿಣ ಏಷ್ಯಾ ರಾಷ್ಟ್ರಗಳು ತೀವ್ರಗೊಳ್ಳುತ್ತಿರುವ ಉಷ್ಣಾಂಶವನ್ನು ಎದುರಿಸಲಿವೆ ಎಂದು ವಿಶ್ವ ಪವನಶಾಸ್ತ್ರ ಸಂಘಟನೆ ಹೇಳಿದೆ.

ಕಳೆದ ವರ್ಷದ ಜಾಗತಿಕ ಸರಾಸರಿ ತಾಪಮಾನ 0.53 ಡಿಗ್ರಿ ಸೆಲ್ಸಿಯಸ್ ಇತ್ತು. ಇದು ಕಳೆದ ದಶಕದಲ್ಲಿಯೇ ಅತೀ ಹೆಚ್ಚು ತಾಪಮಾನ ಕಂಡ ವರ್ಷವಾಗಿದೆ. ಅಲ್ಲದೇ, ಅತೀ ಹೆಚ್ಚು ಉಷ್ಣ ಪರಿಸ್ಥಿತಿ ಎದುರಿಸಿದ 2001-2010ರನೇ ಸಾಲಿಗಿಂತಲೂ ಇದು  ಹೆಚ್ಚು ತಾಪಮಾನ ಎದುರಿಸಿದ ವರ್ಷ. ಆ ಅವಧಿಯಲ್ಲಿ ಜಾಗತಿಕ ಸರಾಸರಿ ತಾಪಮಾನ 0.46 ಡಿ.ಸೆ. ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.