
ಪ್ರಜಾವಾಣಿ ವಾರ್ತೆ
ವಾಷಿಂಗ್ಟನ್ (ಐಎಎನ್‌ಎಸ್): ಟಿಬೆಟನ್ ಬೌದ್ಧ ಧರ್ಮಗುರು ದಲೈಲಾಮಾ ಅವರನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಇಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
 
 ಚೀನಾದೊಂದಿಗೆ ಸಮೀಕರಣ ಹೊಂದುವುದು ಇಲ್ಲವೇ ಚೀನಾದಲ್ಲಿ ಟಿಬೆಟನ್ನರಿಗೆ ಸ್ವಾತಂತ್ರ್ಯ ನೀಡುವ ದಲೈ ಲಾಮಾ ಅವರ ‘ಮಧ್ಯಮ ಮಾರ್ಗ’ವನ್ನು ಒಬಾಮ ಈ ಸಂದರ್ಭದಲ್ಲಿ ಬೆಂಬಲಿಸಿದರು ಎನ್ನಲಾಗಿದೆ.
 
 ಚೀನಾದ ತೀವ್ರ ವಿರೋಧದ ನಡುವೆಯೂ ದಲೈ ಲಾಮಾ ಅವರನ್ನು ಒಬಾಮ ಅವರು ಭೇಟಿಮಾಡಿ ಮಾತುಕತೆ ನಡೆಸಿದರು’ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.