ADVERTISEMENT

ದಾಳಿಗೆ ಸೆನೆಟ್ ಸಮಿತಿ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

ವಾಷಿಂಗ್ಟನ್: ಸಿರಿಯಾ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಯೋಜನೆಗೆ ಪ್ರಮುಖ ಸೆನೆಟ್ ಸಮಿತಿಯೊಂದು ಒಪ್ಪಿಗೆ ನೀಡಿದೆ.

ಸೆನೆಟ್ ವಿದೇಶಾಂಗ ಸಂಬಂಧಗಳ ಸಮಿತಿಯು 2 ದಿನಗಳಿಂದ ಸುಮಾರು 6 ತಾಸಿಗೂ ಅಧಿಕ ಕಾಲ ನಡೆಸಿದ ಚರ್ಚೆ ನಂತರ 10-7 ಮತಗಳ ಅಂತರದಿಂದ ಒಬಾಮಗೆ ದಾಳಿ ಅಧಿಕಾರ ನೀಡುವ ನಿರ್ಣಯಕ್ಕೆ ಸಮ್ಮತಿಸಿತು.

ಸೈಬರ್ ದಾಳಿ: `ಅಮೆರಿಕವು ಸಿರಿಯಾದ ರಕ್ಷಣಾ ವ್ಯವಸ್ಥೆ ಮತ್ತು ಯುದ್ಧೋಪಕರಣಗಳನ್ನು ನಾಶಪಡಿಸಲು ಹಾಗೂ ಅಲ್ಲಿನ ಸರ್ಕಾರದ ಬಗ್ಗೆ ಬೇಹುಗಾರಿಕೆ ನಡೆಸಲು ಕಂಪ್ಯೂಟರ್ ವೈರಸ್‌ಗಳನ್ನು ಬಳಸಿ ಸೈಬರ್ ದಾಳಿ ನಡೆಸಬಹುದು' ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.