ADVERTISEMENT

ದೇವಯಾನಿಗೆ ರಾಜತಾಂತ್ರಿಕ ರಕ್ಷಣೆ ಇಲ್ಲ : ಅಮೆರಿಕ

​ಪ್ರಜಾವಾಣಿ ವಾರ್ತೆ
Published 11 ಜನವರಿ 2014, 11:36 IST
Last Updated 11 ಜನವರಿ 2014, 11:36 IST

ವಾಷಿಂಗ್ಟನ್ (ಪಿಟಿಐ): ಭಾರತಕ್ಕೆ ಮರಳಿರುವ ದೇವಯಾನಿ ಖೋಬ್ರಾಗಡೆ ಅವರಿಗೆ ಯಾವುದೇ ರಾಜತಾಂತ್ರಿಕ ರಕ್ಷಣೆ ಇಲ್ಲ ಮತ್ತು ಅವರ ವಿರುದ್ಧ ಬಂಧನ ವಾರೆಂಟ್ ಹೊರಡಿಸುವ ಸಾಧ್ಯತೆಗಳಿವೆ ಎಂದು ಅಮೆರಿಕ ತಿಳಿಸಿದೆ.

ದೇವಯಾನಿ ಅವರು ಸದ್ಯಕ್ಕೆ ವಿಚಾರಣೆಯಿಂದ ತಪ್ಪಿಸಿಕೊಂಡಿರಬಹದು ಆದರೆ ಅವರ ವಿರುದ್ಧದ ಪ್ರಕರಣ ವಿಚಾರಣೆ ಹಂತದಲ್ಲಿದೆ ಅವರು ನ್ಯಾಯಾಲಯಕ್ಕೆ ಹಾಜರಾಗಲೇ ಬೇಕು ಎಂದು ಅಮೆರಿಕದ ವಿದೇಶಾಂಗ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ದೇವಯಾನಿ ಅವರಿಗೆ ವೀಸಾ ನೀಡುವ ಬಗ್ಗೆ ವಲಸೆ ಇಲಾಖೆ ಪರಿಶೀಲನೆ ನಡೆಸುತ್ತಿದೆ ಎಂದು ವಿದೇಶಾಂಗ ಇಲಾಖೆ ಅಧಿಕಾರಿ ಜೆನ್‌ ಪಾಸ್ಕಿ ತಿಳಿಸಿದ್ದಾರೆ.

ಅವರು ಅಮೆರಿಕದಲ್ಲಿ ಇಲ್ಲ ಎಂದ ಮಾತ್ರಕ್ಕೆ  ಅವರ ವಿರುದ್ಧ ದಾಖಲಾಗಿರುವ ವೀಸಾ ದುರ್ಬಳಕ್ಕೆ ಪ್ರಕರಣ ಹಿನ್ನಡೆಯಾದಂತಲ್ಲ ಎಂದು ಪಾಸ್ಕಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.