ADVERTISEMENT

ನಕ್ಷತ್ರಪುಂಜಗಳ ಸಂಘರ್ಷ

​ಪ್ರಜಾವಾಣಿ ವಾರ್ತೆ
Published 4 ಜೂನ್ 2012, 19:30 IST
Last Updated 4 ಜೂನ್ 2012, 19:30 IST

ವಾಷಿಂಗ್ಟನ್ (ಐಎಎನ್‌ಎಸ್): ನಮ್ಮ ಸೌರಮಂಡಲವಿರುವ ಕ್ಷೀರಪಥ ನಕ್ಷತ್ರಪುಂಜ ಹಾಗೂ ನೆರೆಯ ಆಂಡ್ರೋಮೆಡಾ ನಕ್ಷತ್ರಪುಂಜ ಭಾರಿ ವೇಗದಿಂದ ಡಿಕ್ಕಿಯಾಗುವ ಸಾಧ್ಯತೆ ಇದೆ...!ಭಯ ಬೇಡ. ಈ ಘಟನೆ ಸಂಭವಿಸುವುದು 400 ಕೋಟಿ ವರ್ಷಗಳ ನಂತರ.
 
ಆಂಡ್ರೊಮೆಡಾ ನಕ್ಷತ್ರ ಪುಂಜ ನಮ್ಮ  ಕ್ಷೀರಪಥ 25 ಲಕ್ಷ  ಜ್ಯೋತಿರ್ವರ್ಷದಷ್ಟು ದೂರದಲ್ಲಿವೆ. ಆದರೆ ಇವೆರಡರ ನಡುವಿನ ಗುರುತ್ವ ಹಾಗೂ ಅಗೋಚರ ಕಪ್ಪು ದ್ರವ್ಯಗಳ ಆಕರ್ಷಣೆಯಿಂದಾಗಿ ಅವು   ಹತ್ತಿರವಾಗುತ್ತಿವೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

  `ಇವೆರಡರ ನಡುವಿನ ಸಂಘರ್ಷದ ಸಾಂದ್ರತೆಯನ್ನು ಪರಿಪೂರ್ಣವಾಗಿ ಅರಿಯಲು ಶತಮಾನಗಳಷ್ಟು ಕಾಲಾವಕಾಶ ಬೇಕಾಗುತ್ತದೆ~ ಎಂದು ಬಾಲ್ಟಿಮೋರ್‌ನಲ್ಲಿರುವ ಬಾಹ್ಯಾಕಾಶ ದೂರದರ್ಶಕ ವಿಜ್ಞಾನ ಸಂಸ್ಥೆ(ಎಸ್‌ಟಿಎಸ್‌ಸಿಐ)ನ ವಿಜ್ಞಾನಿ ಸಾಂಗ್ಮೊ ಟೊನಿ ಸೊಹ್ನ್ ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.