ವಾಷಿಂಗ್ಟನ್ (ಐಎಎನ್‌ಎಸ್): ಸಾಗರಗಳಿಗೆ ಸೇರುವ ನದಿ ನೀರಿನ ಕೇವಲ ಶೇ 10ರಷ್ಟನ್ನು ಬಳಸಿಕೊಂಡು 50 ಕೋಟಿ ಜನರಿಗೆ ಬೇಕಾಗುವಷ್ಟು ಸ್ವಚ್ಛ ಪರಿಸರಸ್ನೇಹಿ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನ ಕಂಡುಹಿಡಿದಿರುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ.
ನದಿ ಮತ್ತು ಸಮುದ್ರದ ನೀರಿನಲವಣಾಂಶದಲ್ಲಿನ ವ್ಯತ್ಯಾಸವನ್ನು ಬಳಸಿಕೊಂಡು `ಪ್ರೆಷರ್-ರಿಟಾರ್ಡೆಡ್ ಆಸ್ಮೋಸಿಸ್~ ಮೂಲಕ ವಿದ್ಯುತ್ ಉತ್ಪಾದಿಸಲು ಸಾಧ್ಯ. ಇಲ್ಲಿ ಇಂಗಾಲದ ಡೈಆಕ್ಸೈಡ್ ಹೊರಹೊಮ್ಮುವುದಿಲ್ಲ. ಇಷ್ಟೇ ವಿದ್ಯುತ್ತನ್ನು ಕಲ್ಲಿದ್ದಲಿನಿಂದ ಉತ್ಪಾದಿಸಿದರೆ 100 ಕೋಟಿ ಟನ್ ಇಂಗಾಲದ ಡೈಆಕ್ಸೈಡ್ ವಾತಾವರಣಕ್ಕೆ ಸೇರುತ್ತದೆ ಎಂದು ಯೇಲ್ ಎಂಜಿನಿಯರಿಂಗ್ ಸ್ಕೂಲ್‌ಸಂಶೋಧಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.