ADVERTISEMENT

ನಾರ್ವೆ: ಭಾರತೀಯ ದಂಪತಿ ವಿರುದ್ಧ ಮಗುವಿನೊಂದಿಗೆ ದುರ್ವರ್ತನೆ ಆರೋಪ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2012, 9:31 IST
Last Updated 1 ಡಿಸೆಂಬರ್ 2012, 9:31 IST

ಓಸ್ಲೋ (ಪಿಟಿಐ): ಮಗುವನ್ನು ಬೈದ ಪ್ರಕರಣದಲ್ಲಿ ಇಲ್ಲಿ ಬಂಧಿತರಾದ ಭಾರತೀಯ ದಂಪತಿ ವಿರುದ್ಧ ತಮ್ಮ ಮಗುವನ್ನು ಪದೇ ಪದೇ ಕೆಟ್ಟದಾಗಿ ನಡೆಸಿಕೊಂಡ ಆರೋಪವನ್ನು ಹೊರಿಸಲಾಗಿದೆ. ಈ   ಅಪರಾಧಕ್ಕಾಗಿ ಪಾಲಕರಿಗೆ ಕನಿಷ್ಠ ಒಂದು ವರ್ಷ ಮೂರು ತಿಂಗಳ ಸೆರೆವಾಸ ವಿಧಿಸಬೇಕು ಎಂದು ಪ್ರಾಸೆಕ್ಯೂಷನ್ ಕೋರಿಕೆ ಸಲ್ಲಿಸಿದೆ.

ಓಸ್ಲೋ ಪೊಲೀಸ್ ಇಲಾಖೆಯ ಹೇಳಿಕೆ ಪ್ರಕಾರ ಪಾಲಕರನ್ನು ಬಂಧನಕ್ಕೆ ಒಳಪಡಿಸಲಾಗಿದ್ದು, ಭಾರತಕ್ಕೆ ಹಿಂತಿರುಗುವ ಮೂಲಕ ಅವರು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಬಹುದು ಎಂಬ ಅನುಮಾನವನ್ನೂ ವ್ಯಕ್ತ ಪಡಿಸಲಾಗಿದೆ. ಮೇಲ್ಮನವಿ ನ್ಯಾಯಾಲಯವು ಪ್ರತಿವಾದಿಗಳ ಮನವಿಯನ್ನು ಆಲಿಸುವ ಪ್ರಕ್ರಿಯೆ ನಡೆಸುತ್ತಿದ್ದು ಓಸ್ಲೋ ಜಿಲ್ಲಾ ನ್ಯಾಯಾಲಯವು ಡಿಸೆಂಬರ್ 3ರಂದು ತೀರ್ಪು ಪ್ರಕಟಿಸಲಿದೆ.

ತಾಯಿಗೆ ಒಂದು ತಿಂಗಳೂ ಮೂರು ತಿಂಗಳ ಸೆರೆವಾಸ ಹಾಗೂ ತಂದೆಗೆ ಒಂದು ತಿಂಗಳು ಆರು ತಿಂಗಳು ಸೆರೆವಾಸ ವಿಧಿಸುವಂತೆ ಪ್ರಾಸೆಕ್ಯೂಷನ್ ಪ್ರಸ್ತಾವ ಮಂಡಿಸಿದೆ.ಪ್ರಕರಣದ ತೀರ್ಪನ್ನು ಡಿಸೆಂಬರ್ 3ರಂದು ಪ್ರಕಟಿಸಲಾಗುವುದು ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

ಆಂಧ್ರ ಪ್ರದೇಶದ ಸಾಫ್ಟ್ ವೇರ್ ಉದ್ಯೋಗಿ ಚಂದ್ರಶೇಖರ ವಲ್ಲಭನೇನಿ ಮತ್ತು ಅವರ ಪತ್ನಿ ಭಾರತೀಯ ರಾಜತಾಂತ್ರಿಕ ಕಚೇರಿಯಲ್ಲಿ ಅಧಿಕಾರಿಯಾಗಿರುವ ಅನುಪಮ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ತನ್ನ ವರ್ತನೆಯನ್ನು ಪುನರಾವರ್ತಿಸಿದರೆ ಭಾರತಕ್ಕೆ ವಾಪಸ್ ಕಳುಹಿಸಿ ಬಿಡುವುದಾಗಿ ತನ್ನ ಪಾಲಕರು ಬೆದರಿಸಿದ್ದಾರೆ ಎಂಬುದಾಗಿ 7 ವರ್ಷದ ಮಗು ಶಾಲಾ ಶಿಕ್ಷಕರ ಬಳಿ ದೂರು ನೀಡಿದ್ದನ್ನು ಅನುಸರಿಸಿ ಪೊಲೀಸರು ಚಂದ್ರಶೇಖರ ಮತ್ತು ಅವರ ಪತ್ನಿಯನ್ನು ಅವರನ್ನು ಬಂಧಿಸಿದ್ದಾರೆ ಎಂಬುದಾಗಿ ಹೈದರಾಬಾದ್ ನಲ್ಲಿ ಇರುವ ಚಂದ್ರಶೇಖರ ಅವರ ಸಹೋದರ ಸಂಬಂಧಿ ವಿ. ಶೈಲೇಂದ್ರ ಪ್ರತಿಪಾದಿಸಿದ್ದಾರೆ.

ಶಾಲಾ ಬಸ್ಸಿನಲ್ಲಿ ಬಾಲಕ ಪ್ಯಾಂಟಿನಲ್ಲೇ ಮೂತ್ರ ಮಾಡುತ್ತಿದ್ದ ಎನ್ನಲಾಗಿದ್ದು, ಇದು ಪುನರಾವರ್ತನೆಯಾದರೆ ಭಾರತಕ್ಕೆ ವಾಪಸ್ ಕಳುಹಿಸಿಬಿಡುವುದಾಗಿ ಪಾಲಕರು ಬೆದರಿಸಿದ್ದರು. ಅಲ್ಲದೆ ಬಾಲಕ ಶಾಲೆಯಿಂದ ಆಟಿಕೆಗಳನ್ನು ತರುತ್ತಿದ್ದ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.