ADVERTISEMENT

ನಿವೃತ್ತ ನ್ಯಾ.ನಾಸಿರುಲ್‌ ಮುಲ್ಕ್‌ ಪಾಕಿಸ್ತಾನದ ಹಂಗಾಮಿ ಪ್ರಧಾನಿ

ಪಿಟಿಐ
Published 1 ಜೂನ್ 2018, 19:30 IST
Last Updated 1 ಜೂನ್ 2018, 19:30 IST
ನಾಸಿರುಲ್‌ ಮುಲ್ಕ್‌
ನಾಸಿರುಲ್‌ ಮುಲ್ಕ್‌   

ಇಸ್ಲಾಮಾಬಾದ್‌: ಪಾಕಿಸ್ತಾನದ ನಿವೃತ್ತ ಮುಖ್ಯ ನ್ಯಾಯಮೂರ್ತಿ ನಾಸಿರುಲ್‌ ಮುಲ್ಕ್‌ ಅವರು ಹಂಗಾಮಿ ಪ್ರಧಾನಿಯಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.

ಜುಲೈ 25ರಂದು ಇಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಬಳಿಕ ಹೊಸ ಸರ್ಕಾರ ರಚನೆಯಾಗುವವರೆಗೆ ನಾಸಿರುಲ್‌ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

ಅಧ್ಯಕ್ಷ ಮಮ್ನೂನ್‌ ಹುಸೈನ್‌ ಪ್ರಮಾಣ ವಚನ ಬೋಧಿಸಿದರು. ಆಡಳಿತ ಹಾಗೂ ವಿರೋಧ ಪಕ್ಷಗಳು ಒಮ್ಮತದಿಂದ ನಾಸಿರುಲ್‌ ಅವರನ್ನು ಆಯ್ಕೆ ಮಾಡಿವೆ.

ADVERTISEMENT

‘ನಿವೃತ್ತ ಮುಖ್ಯ ನ್ಯಾಯಮೂರ್ತಿ ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಿದರೆ ಯಾರೂ ವಿರೋಧ ಮಾಡಲಾರರು’ ಎಂದು ಮಾಜಿ ಪ್ರಧಾನಿ ಶಾಹಿದ್‌ ಖಕನ್‌ ಅಬ್ಬಾಸಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಈಗಿನ ಸರ್ಕಾರದ ಅಧಿಕಾರವಧಿ ಮೇ 31ಕ್ಕೆ ಕೊನೆಗೊಂಡಿದೆ. ಹಂಗಾಮಿ ಪ್ರಧಾನಿ ನೇತೃತ್ವದ ಸರ್ಕಾರ ಯಾವುದೇ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವಂತಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.