ADVERTISEMENT

ನೇಪಾಳ: ಭಾರತದ ಅಧಿಕಮುಖಬೆಲೆ ನೋಟಿಗೆ ನಿಷೇಧ

ಕಾರ್ಮಿಕರು, ಪ್ರವಾಸಿಗರಿಗೆ ತೊಂದರೆ

ಪಿಟಿಐ
Published 14 ಡಿಸೆಂಬರ್ 2018, 20:15 IST
Last Updated 14 ಡಿಸೆಂಬರ್ 2018, 20:15 IST
₹500 ಮತ್ತು ₹2000 ಮುಖಬೆಲೆಯ ನೋಟುಗಳು
₹500 ಮತ್ತು ₹2000 ಮುಖಬೆಲೆಯ ನೋಟುಗಳು   

ಕಠ್ಮಂಡು: ಭಾರತದ ₹2,000, ₹500 ಮತ್ತು ₹200 ಮುಖಬೆಲೆಯ ನೋಟುಗಳ ಬಳಕೆಯನ್ನು ನೇಪಾಳ ಸರ್ಕಾರ ನಿಷೇಧಿಸಿದೆ.

ಭಾರತದ ₹100 ಮುಖಬೆಲೆಗಿಂತ ಹೆಚ್ಚಿನ ಮೌಲ್ಯದ ನೋಟುಗಳನ್ನು ಇಟ್ಟುಕೊಳ್ಳಬಾರದು ಮತ್ತು ಚಲಾವಣೆ ಮಾಡಬಾರದು ಎಂದು ಸರ್ಕಾರ ಜನರಿಗೆ ತಿಳಿಸಿದೆ. ‘ಈ ನೋಟುಗಳಿಗೆ ಕಾನೂನಿನ ಮಾನ್ಯತೆ ಇಲ್ಲ’ ಎಂದು ಮಾಹಿತಿ ಮತ್ತು ಸಂವಹನ ಸಚಿವ ಗೋಕುಲ್‌ ಪ್ರಸಾದ್‌ ಬಸ್ಕೋಟ ಅವರು ಹೇಳಿರುವುದನ್ನು ಉಲ್ಲೇಖಿಸಿ ‘ಕಠ್ಮಂಡು ಪೋಸ್ಟ್‌’ ಪತ್ರಿಕೆ ವರದಿ ಮಾಡಿದೆ.

ಈ ಕ್ರಮದಿಂದ, ಭಾರತದಲ್ಲಿ ಕೆಲಸ ಮಾಡುವ ನೇಪಾಳದ ಕಾರ್ಮಿಕರು ಮತ್ತು ನೇಪಾಳಕ್ಕೆ ಪ್ರವಾಸ ತೆರಳುವ ಭಾರತೀಯರಿಗೆ ತೊಂದರೆಯಾಗಲಿದೆ.

ADVERTISEMENT

ಭಾರತ ಸರ್ಕಾರವು 2016ರಲ್ಲಿ ಅಧಿಕ ಮುಖಬೆಲೆಯ ಹಳೆಯ ನೋಟುಗಳನ್ನು ರದ್ದು ಮಾಡಿದ ನಂತರ, ₹2000 ಮತ್ತು ₹200 ಮುಖಬೆಲೆಯ ನೋಟುಗಳನ್ನು ಪರಿಚಯಿಸಿತ್ತು. ₹500ರ ಹೊಸ ನೋಟು ಸಹ ಚಲಾವಣೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.